ಟ್ರಾವೆಲ್ಸ್ ಮಾಲಕ ಕುಸಿದುಬಿದ್ದು ಮೃತ್ಯು
ಉಪ್ಪಳ: ಉಪ್ಪಳದಲ್ಲಿ ಟ್ರಾವೆಲ್ಸ್ ಮಾಲಕನಾಗಿದ್ದ ಬಾಯಾರು ನಿವಾಸಿ ಡಿ.ಎಂ. ಸಿದ್ದಿಕ್ (45) ಕುಸಿದುಬಿದ್ದು ಮೃತಪಟ್ಟರು. ನಿನ್ನೆ ಮಧ್ಯಾಹ್ನ ಮನೆಯಲ್ಲಿದ್ದ ವೇಳೆ ಘಟನೆ ನಡೆದಿದೆ.
ದಿ| ಮುಹಮ್ಮದ್ ಕುಂಞಿ-ಖದೀಜ ದಂಪತಿಯ ಪುತ್ರನಾದ ಮೃತರು ಪತ್ನಿ ಫಾತಿಮತ್ ಸುಹರ, ಮಕ್ಕಳಾದ ಫಿನಾನ್, ಶಂನಾನ್, ಸಲ್ಮಾನ್, ಸಹೋದರ-ಸಹೋದರಿ ಯರಾದ ಬಶೀರ್, ಜಲೀಲ್, ಶಾಫಿ, ಶರೀಫ್, ಅಪ್ಸ, ಮಿಸ್ರಿಯ, ಸುಲೈಖ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.