ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆಗಳು ಪೂರ್ಣ

ಕಾಸರಗೋಡು: ಸ್ವಾತಂ ತ್ರ್ಯೋತ್ಸವ ಆಚರಣೆಗೆ ವಿವಿಧೆಡೆ ಸಿದ್ಧತೆಗಳು ಪೂರ್ಣಗೊಂಡಿದೆ. ಕಾಸರಗೋಡು ವಿದ್ಯಾನಗರ ನಗರಸಭಾ ಸ್ಟೇಡಿಯಂನಲ್ಲಿ ನಾಳೆ ಬೆಳಿಗ್ಗೆ 8.20ಕ್ಕೆ ಸ್ವಾತಂತ್ರ್ಯೋತ್ಸವ ಪರೇಡ್ ನಡೆಯಲಿರುವುದು. ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಅವರು ಪಥ ಸಂಚಲನದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡು ವರು. ಪರೇಡ್‌ನಲ್ಲಿ ೨೦ ಫ್ಲಟೂನ್ ಗಳು ಭಾಗವಹಿಸಲಿವೆ. ಎಆರ್ ಕ್ಯಾಂಪ್ ಅಸಿಸ್ಟೆಂಟ್ ಕಮಾಂಡೆಂಟ್ ಪರೇಡ್ ನಿಯಂತ್ರಿಸುವರು. ಜಿಲ್ಲಾ ಸಶಸ್ತ್ರ ಪೊಲೀಸ್, ಲೋಕಲ್ ಪೊಲೀಸ್, ಮಹಿಳಾ ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಎಂಬೀ ಫ್ಲಟೂನ್‌ಗಳು, ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಹಿತ ಜಿಲ್ಲೆಯ ಹಲವು ಶಾಲೆಗಳ ಎನ್‌ಸಿಸಿ, ಎನ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಲಿವೆ. ಪರೇಡ್‌ನಲ್ಲಿ ಸ್ವಾತಂತ್ರ್ಯ ಹೋ ರಾಟಗಾರರು, ಜನಪ್ರತಿನಿಧಿಗಳು, ಸರಕಾರಿ ನೌಕರರು ಹಾಗೂ ಸಾರ್ವ ಜನಿಕರು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.

You cannot copy contents of this page