ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ದಾದಿಯನ್ನು ಅತ್ಯಾಚಾರ ನಡೆಸಿ ಕೊಲೆ

ಝಾರ್ಖಂಡ್: ಕೋಲ್ಕತ್ತಾದಲ್ಲಿ ಪಿಜಿ ವೈದ್ಯೆಯನ್ನು ಕೊಲೆಗೈದ ಭೀಕರ ಘಟನೆಯ ಬೆನ್ನಲ್ಲೇ ಇನ್ನೋರ್ವೆ ಆರೋಗ್ಯ ಕಾರ್ಯಕರ್ತೆಯನ್ನು ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ. ಉತ್ತರಾಖಂಡ್‌ನ ಖಾಸಗಿ ಆಸ್ಪತ್ರೆ ಯಲ್ಲಿ ದಾದಿಯಾಗಿರುವ ಯುವತಿ ಯನ್ನು  ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದು ಕಾಡಿನಲ್ಲಿ ಉಪೇಕ್ಷಿಸ ಲಾಗಿದೆ. ಆಸ್ಪತ್ರೆಯಿಂದ ಉತ್ತರಪ್ರ ದೇಶದ ಗಡಿ ಭಾಗದಲ್ಲಿರುವ ಮನೆಗೆ ಮರಳುತ್ತಿದ್ದ ದಾದಿ ಮೇಲೆ  ದುಷ್ಕರ್ಮಿ  ದಾಳಿ ನಡೆಸಿ ಕೊಲೆ ನಡೆಸಿರುವುದಾಗಿ ತಿಳಿದುಬಂದಿದೆ. ಘಟನೆಯ 9 ದಿನಗಳ ಬಳಿಕ   ಮೃತದೇಹ ಪತ್ತೆಯಾಗಿದೆ. ಜುಲೈ 30ರಂದು ಸಂಜೆ ಕೆಲಸ ಮುಗಿಸಿ ಆಸ್ಪತ್ರೆಯಿಂದ ಮರಳಿದ ದಾದಿ ರುದ್ರಾಪುರದ ಇಂದ್ರಚೌಕ್‌ನಿಂದ  ರಿಕ್ಷಾಕ್ಕೆ ಹತ್ತುವುದು ಸಿಸಿ ಟಿವಿಯಲ್ಲಿ ಕಂಡುಬಂದಿದೆ. ಆದರೆ ಆಕೆ ಮನೆಗೆ ತಲುಪಿರಲಿಲ್ಲ. ಅದರ ಮರುದಿನ ದಾದಿ ನಾಪತ್ತೆದಾದ ಬಗ್ಗೆ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಶೋಧ ನಡೆಸುತ್ತಿದ್ದಾಗ ಮನೆಯಿಂದ ಒಂದೂವರೆ ಕಿಲೋ ಮೀಟರ್ ದೂರದ ನಿರ್ಜನ ಹಿತ್ತಿಲಿನಲ್ಲಿ ದಾದಿಯ  ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ  ಉತ್ತರಪ್ರದೇಶದ ಬರೇಲಿಯಿಂದ  ಕಾರ್ಮಿ ಕನಾದ ಧರ್ಮೇಂದ್ರ ಎಂಬಾತನನ್ನು ಪೊಲೀ ಸರು ಬಂಧಿಸಿದ್ದಾರೆ. ಆತನನ್ನು ತನಿಖೆ ನಡೆಸಿದಾಗ ಕೊಲೆಯ ಪೂರ್ಣ ಮಾಹಿತಿ ಪೊಲೀಸರಿಗೆ ಲಭಿಸಿದೆ.  ದಾದಿಯ ಮೊಬೈಲ್ ಫೋನ್ ಹಾಗೂ ಪರ್ಸ್‌ನಲ್ಲಿದ್ದ 3 ಸಾವಿರ ರೂಪಾಯಿ ಯೊಂದಿಗೆ ರಾಜಸ್ಥಾನಕ್ಕೆ ಪರಾರಿಯಾದ ಆರೋಪಿ ಅದೇ ಫೋನ್ ಬಳಸಿ ಬೇರೆಯವರಿಗೆ ಕರೆ ಮಾಡಿರುವುದೇ ಆತ ಸುಲಭದಲ್ಲಿ ಸೆರೆಗೀಡಾಗಲು ಕಾರಣವಾಗಿದೆ.

RELATED NEWS

You cannot copy contents of this page