ಅಬುದಾಬಿಯಲ್ಲಿ ಕಟ್ಟಡದಿಂದ ಬಿದ್ದು ಯುವಕ ಮೃತ್ಯು

ತಲಪಾಡಿ: ಅಬುದಾಬಿಯಲ್ಲಿ ಕಟ್ಟಡದಿಂದ ಬಿದ್ದು ಯುವಕ  ಮೃತಪಟ್ಟರು. ಉಳ್ಳಾಲ ಪಟ್ಟೋರಿ ನಿವಾಸಿ ಉಮ್ಮರ್‌ರ ಪುತ್ರ ನೌಫಲ್ (26) ಮೃತಪಟ್ಟವರು. ಅಬು ದಾಬಿಯ ಖಾಸಗಿ ಕಂಪೆನಿಯಲ್ಲಿ ಎಸಿ ಟೆಕ್ನೀಶ್ಯನ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮಧ್ಯೆ ಅಪಾಯ ಸಂಭವಿಸಿದೆ. ಬನಿಯಾಸ್ ಕೇಂದ್ರೀಯ ಶವಾಗಾರದಲ್ಲಿ ಇರಿಸಿರುವ ಮೃತದೇಹವನ್ನು ಕಾನೂನು ಕ್ರಮಗಳ ಬಳಿಕ ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತ ಯುವಕ ತಂದೆ, ತಾಯಿ ಮರಿಯಮ್ಮ, ಸಹೋದರರಾದ ನಾಸರ್, ನಿಸಾರ್, ನಿಹಾಸ್, ಅನ್ಸಾರ್, ಸಹೋದರಿ ಸುಹಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page