ವಿದ್ಯುತ್ ಕಂಬ ಶೋಚನೀಯ ಸ್ಥಿತಿಯಲ್ಲಿ ಯಾವುದೇ ಕ್ಷಣ ಮುರಿದು ಬೀಳಬಹುದಾದ ಸ್ಥಿತಿ

ಕುಂಬಳೆ: ವಿದ್ಯುತ್ ಕಂಬವೊಂದು ಜೀರ್ಣಾವಸ್ಥೆಗೆ ತಲುಪಿ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸಾಧ್ಯತೆಯಿದ್ದು, ಇದರಿಂದಾಗಿ ನಾಗರಿಕರು ತೀವ್ರ ಆತಂಕ ಎದುರಿಸುತ್ತಿದ್ದಾರೆ.

ಕಟ್ಟತ್ತಡ್ಕ ಜಂಕ್ಷನ್ ಸಮೀಪ ಕಳತ್ತೂರು ರಸ್ತೆ ಬದಿಯಿರುವ ಕಂಬದ ಸ್ಥಿತಿ ಇದಾಗಿದೆ. ಎಚ್‌ಟಿ ವಿದ್ಯುತ್ ತಂತಿ ಹಾದು ಹೋಗುವ ಈ ಕಂಬದ ಅಡಿ ಭಾಗ ಪೂರ್ಣವಾಗಿ ಜೀರ್ಣಗೊಂಡಿದೆ. ವರ್ಷಗಳ ಹಿಂದೆ ಈ ಕಬ್ಬಿಣದ ಕಂಬವನ್ನು ಸ್ಥಾಪಿಸಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಸಮೀಪದಲ್ಲೇ ಒಂದು ಮರವಿದ್ದು, ಅದರ ಆಧಾರದಲ್ಲಿ ಈಗ ಕಂಬ ನಿಂತಿದೆ. ಕಂಬದ ಶೋಚನೀಯ ಸ್ಥಿತಿಯ ಕುರಿತು ಕೆಎಸ್‌ಇಬಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ  ಕಂಬ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ. ಇದೇ ಪರಿಸರದಲ್ಲಿ ಅಂಗಡಿಯೊಂದು ಕಾರ್ಯಾಚರಿಸುತ್ತಿದೆ. ಆಕಸ್ಮಾತ್ ಕಂಬ ಮುರಿದು ಬಿದ್ದರೆ ಭಾರೀ ಅಪಾಯ ಸಾಧ್ಯತೆ ಇದೆಯೆಂದೂ ಅದರ ಮುಂಚಿತವಾಗಿ ಕಂಬವನ್ನು ತೆರವುಗೊಳಿಸಿ ಹೊಸ ಕಂಬ ಸ್ಥಾಪಿಸಬೇಕೆಂದೂ ನಾಗರಿಕರು ತಿಳಿಸುತ್ತಿದ್ದಾರೆ.

You cannot copy contents of this page