ಬಾಲಕಿಯೊಂದಿಗೆ ಪ್ರೇಮದ ನಾಟಕವಾಡಿ ಲೈಂಗಿಕ ಕಿರುಕುಳ: ಬಸ್ ಕಂಡಕ್ಟರ್ ಬಂಧನ

ಹೊಸದುರ್ಗ: ಬಸ್‌ನಲ್ಲಿ ದೈನಂದಿನ ಪ್ರಯಾಣಿಸುತ್ತಿದ್ದ ೧೭ ವರ್ಷದ  ಬಾಲಕಿ ಜತೆ ಪ್ರೇಮದ ನಾಟಕವಾಡಿ ಬಳಿಕ ಪುಸಲಾಯಿಸಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಬಸ್ ಕಂಡಕ್ಟರ್‌ನನ್ನು ಚಕ್ಕರಕಲ್ ಪೊಲೀಸರು ಬಂಧಿಸಿ ಆತನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣೂರು ಚಕ್ಕರಕ್ಕಲ್ ತಲಮುಂಡ ನಿವಾಸಿ ಖಾಸಗಿ ಬಸ್ ಕಂಡಕ್ಟರ್ ಇಸ್ಮಾಯಿಲ್ (೨೧) ಬಂಧಿತ ಆರೋಪಿ. ಆತ ದುಡಿಯುತ್ತಿರುವ ಬಸ್‌ನಲ್ಲಿ ದೈನಂದಿನ ಪ್ರಯಾಣಿಸುತ್ತಿದ್ದ ೧೭ರ ಹರೆಯದ ಬಾಲಕಿಯನ್ನು ಪರಿಚಯಗೊಂಡು ಸ್ನೇಹದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನುಕಳೆದ ಎಪ್ರಿಲ್‌ನಲ್ಲಿ    ಮನೆಗೆ ಕರೆದೊಯ್ದು ಆಕೆಗೆ  ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ    ಬಳಿಕ ಚಕ್ಕರಕಲ್ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ.

ಬಸ್‌ನಲ್ಲಿ ಪ್ರಯಾಣಿಸುವ ಇತರ ಕೆಲವು ಯುವತಿಯರೊಂದಿಗೂ ಆರೋಪಿ ಇದೇ ರೀತಿ ಸ್ನೇಹದ ನಾಟಕವಾಡಿ ಅವರನ್ನು ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಸಂಪರ್ಕಿಸಿ ಶೋಷಣೆ ನಡೆಸಲೆತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page