ಶೇರ್ ಮಾರ್ಕೆಟಿಂಗ್ ಟ್ರೇಡಿಂಗ್ ಹೆಸರಲ್ಲಿ 2.50 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಬದಿಯಡ್ಕ: ಆನ್‌ಲೈನ್ ಮೂಲಕ ಶೇರ್ ಮಾರ್ಕೆಟಿಂಗ್ ಟ್ರೇಡಿಂಗ್‌ನಲ್ಲಿ ಹಣ ಹೂಡಿದಲ್ಲಿ ಭಾರೀ ಲಾಭ ಲಭಿಸುವುದಾಗಿ ನಂಬಿಸಿ ನೀರ್ಚಾಲು ನಿವಾಸಿಯೋರ್ವರಿಂದ  2,50,000 ರೂ. ಪಡೆದು ವಂಚಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ನೀರ್ಚಾಲು  ಕುಂಟಿಕಾನ ಪಾಡಲಡ್ಕದ ಲಿಯೋ ಜೋಸ್ (58) ಎಂಬವರು ನೀಡಿದ ದೂರಿನಂತೆ  ಡ್ಯಾನಿಲಿಪೋಲಿ ಮತ್ತು ಅಮಿಲಿಯ ಎಂಬಿಬ್ಬರ ವಿರುದ್ಧ  ಈ ಪ್ರಕರಣ ದಾಖಲಿಸಲಾಗಿದೆ.  ವಾಟ್ಸಪ್ ಗ್ರೂಪ್‌ನ ಮೂಲಕ ಪರಿಚಯಗೊಂಡ ಆರೋಪಿಗಳು ಆನ್‌ಲೈನ್ ಶೇರ್ ಮಾರ್ಕೆಟಿಂಗ್ ಟ್ರೇಡಿಂಗ್ ಹೆಸರಲ್ಲಿ ಭಾರೀ ಲಾಭ ಗಿಟ್ಟಿಸಿಕೊಡುವುದಾಗಿ ನಂಬಿಸಿ ಜುಲೈ  17ರಿಂದ 30ರ ಅವಧಿಯಲ್ಲಿ ತನ್ನಿಂದ 2.50 ಲಕ್ಷ ರೂ. ಪಡೆದ ಬಳಿಕ ಲಾಭವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಲಿಯೋ ಜೋಸ್ ತಿಳಿಸಿದ್ದಾರೆ.

You cannot copy contents of this page