ಆನ್‌ಲೈನ್ ವ್ಯಾಪಾರದ ಹೆಸರಲ್ಲಿ ಹಣ ಪಡೆದು ವಂಚನೆ: ವಿದೇಶಕ್ಕೆ ಪರಾರಿಯಾಗಲೆತ್ನಿಸಿದ ಆರೋಪಿ ಸೆರೆ
ಕಾಸರಗೋಡು: ಆನ್‌ಲೈನ್ ವ್ಯಾಪಾರದಲ್ಲಿ ಭಾರೀ ಲಾಭ ಗಿಟ್ಟಿಸಿಕೊಡುವುದಾಗಿ ನಂಬಿಸಿ ಎಲ್‌ಐಸಿ ಸಿಬ್ಬಂದಿಯಿಂದ ೧೨.೭೫ ಲಕ್ಷ ರೂ. ಪಡೆದು ಬಳಿಕ ವಂಚನೆಗೈದ ಪ್ರಕರಣದ ಪ್ರಧಾನ ಆರೋಪಿಯನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಸರಗೋಡು ಎಸ್‌ಐ ಎಸ್. ರುಮೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಮಲಪ್ಪುರಂ ಕೋಟೂರು ಉರ್ದುನಗರದ ವಿ. ಹಿದಾಯತುಲ್ಲಾ (24) ಬಂಧಿತ ಆರೋಪಿ. ಎಲ್‌ಐಸಿ ಸಿಬ್ಬಂದಿ ಉದಿನೂರು ನಿವಾಸಿ ಎ.ವಿ. ವೇಣುಗೋಪಾಲ್ ಎಂಬವರು ನೀಡಿದ ದೂರಿನಂತೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನ ಪತ್ತೆಗಾಗಿರುವ ಲುಕೌಟ್ ನೋಟೀಸನ್ನು ಪೊಲೀಸರು ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಕಳುಹಿಸಿಕೊಟ್ಟಿದ್ದರು. ಈ ಮಧ್ಯೆ ಆರೋಪಿ ಅಬುದಾಬಿಗೆ ಪಲಾಯನಗೈ ಯ್ಯಲೆಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಅಲ್ಲಿ ಆತನನ್ನು ವಿಮಾನ ನಿಲ್ದಾಣದ ಎಮಿಗ್ರೇಷನ್ ವಿಭಾಗ ದವರು ತಡೆದು ನಿಲ್ಲಿಸಿ ಬಳಿಕ ನೀಡಿದ ಮಾಹಿತಿ ಯಂತೆ ಕಾಸರಗೋಡು ಪೊಲೀಸರು ಚೆನ್ನೈಗೆ ಸಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಆನ್‌ಲೈನ್ ವ್ಯಾಪಾರದಲ್ಲಿ ಶೇ. 3೦ರಷ್ಟು ಲಾಭ ನೀಡುವುದಾಗಿ ನಂಬಿಸಿ ಈ ಪ್ರಕರಣದ ಆರೋಪಿಗಳು ತನ್ನಿಂದ ಆನ್‌ಲೈನ್ ಮೂಲಕ 14 ಲಕ್ಷ ರೂ. ಪಡೆದಿದ್ದಾರೆಂದು ಬಳಿಕ ಅದರಲ್ಲಿ 1.25 ಲಕ್ಷ ರೂ. ಹಿಂದಿರುಗಿಸಿದ್ದರು. ಅದಾದ ನಂತರ ಲಾಭಾಂಶವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆಗೈದಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವೇಣುಗೋಪಾಲ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಆರೋ ಪಿಗಳು ತನ್ನನ್ನು ಪರಿಚಯಗೊಂ ಡಿದ್ದರೆಂದು ಊರಿನಲ್ಲಿ ವೇಣುಗೋ ಪಾಲ್ ತಿಳಿಸಿದ್ದರು. ಈ ಪ್ರರಣಕ್ಕೆ ಸಂಬಂಧಿಸಿ ಮಲಪ್ಪುರಂ ಕೋಟೂರು ಕಡಂಬೋಟ್ ವೀಟಿಲ್‌ನ ಮೊಹಮ್ಮದ್ ನಿಶಾಂ (23), ಕಲ್ಲಿಕೋಟೆ ನಿವಾಸಿಗಳಾದ ಅಖಿಲ್ (34), ಜಾಸಿಂ (25) ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.