ಸಿ.ಎ. ಮೊಹಮ್ಮದ್ ಕೊಲೆ ಪ್ರಕರಣದ ಆರೋಪಿಗಳು ತಪ್ಪಿತಸ್ಥರು: ತೀರ್ಪು ಆ. 29ರಂದು

ಆರೋಪಿಗಳ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆ ಹಿನ್ನೆಲೆಯಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣ ಘೋಣೆಯನ್ನು ಈ ತಿಂಗಳ 29ರಂದು ನ್ಯಾಯಾಲಯ ಮೀಸಲಿರಿಸಿದೆ. ಕೂಡ್ಲು ಗುಡ್ಡೆ ಟೆಂಪಲ್ ದೇವಸ್ಥಾನ ಬಳಿಯ ಸಂತೋಷ್ ನಾಯ್ಕ ಅಲಿಯಾಸ್ ಬಜೆ ಸಂತೋಷ್ (37), ತಾಳಿಪಡ್ಪು ನಿವಾಸಿ ಕೆ. ಶಿವ ಪ್ರಸಾದ್ ಅಲಿಯಾಸ್ ಶಿವ (41), ಕೂಡ್ಲು ಅಯ್ಯಪ್ಪ ನಗರದ ಕೆ. ಅಜಿತ್ ಕುಮಾರ್ ಅಲಿಯಾಸ್ ಅಜ್ಜು (36) ಮತ್ತು ಅಡ್ಕತ್ತಬೈಲು ಉಸ್ಮಾನ್ ಕ್ವಾರ್ಟ ರ್ಸ್‌ನ ಕೆ.ಜಿ. ಕಿಶೋರ್ (40) ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ. 

ಅಂದು ಕಾಸರಗೋಡು ಇನ್ಸ್ ಪೆಕ್ಟರ್ ಆಗಿದ್ದು, ಈಗ ಜಿಲ್ಲಾ ಹೆಚ್ಚುವರಿ ಎಸ್.ಪಿ ಆಗಿರುವ ಪಿ. ಬಾಲಕೃಷ್ಣನ್ ನಾಯರ್‌ರ ನೇತೃತ್ವದ ಪೊಲೀಸರ ತಂಡ ಈ ಕೊಲೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು. ಕೊಲೆಗೈಯ್ಯಲ್ಪಟ್ಟ ಮೊಹಮ್ಮದ್‌ರ ಎರಡನೇ ಮಗ ಈ ಕೊಲೆ ಪ್ರಕರಣದ ಪ್ರಧಾನ ಸಾಕ್ಷಿದಾರನಾಗಿದ್ದಾನೆ.

2008 ಎಪ್ರಿಲ್‌ನಲ್ಲಿ ಇಡೀ ಕಾಸರಗೋಡನ್ನೇ ನಡುಗಿಸಿದ್ದ ಸರಣಿ ಕೊಲೆ ಪ್ರಕರಣಗಳಲ್ಲಿ ನಾಲ್ಕು ಮಂದಿ ಬರ್ಬರವಾಗಿ ಕೊಲೆಗೈಯ್ಯಲ್ಪಟ್ಟಿದ್ದಾರೆ. ಎಪ್ರಿಲ್ 14ರ ವಿಷು ದಿನದಂದು ಕಾಸರಗೋಡು ಬೀಚ್ ರಸ್ತೆಯ ಆಚ್ಚಪ್ಪ ಕಂಪೌಂಡ್‌ನ ಸಂದೀಪ್ (20) ಮೊದಲು ಕೊಲೆಗೈಯ್ಯಲ್ಪಟ್ಟಿದ್ದರು. ಅದುವೇ ಗರಭೆ ಭುಗಿಲೇಳಲು ಪ್ರಧಾನ ಕಾರಣವಾಗಿತ್ತು. ಈ ಕೊಲೆ ನಡೆದ ಬೆನ್ನಲ್ಲೇ ಎ. 16ರಂದು ಕಾಸಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯ ಮೊಹ ಮ್ಮದ್ ಸಿನಾನ್ (20)ನನ್ನು ಕಾಸರ ಗೋಡು ಅಶೋಕ್ ನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂಕದ ಅಡಿ ಭಾಗದ ರಸ್ತೆಯಲ್ಲಿ ಅಕ್ರಮಿಗಳ ತಂಡವೊಂದು ಕೊಲೆಗೈದಿತ್ತು. ನಂತರ ಕಾಸರಗೋಡಿನ ಖ್ಯಾತ ನ್ಯಾಯವಾದಿ ಹಾಗೂ ಬಿ.ಎಂ.ಎಸ್. ಜಿಲ್ಲಾ ಉಪಾಧ್ಯಕ್ಷಗೂ ಆಗಿದ್ದ ಕಾಸರಗೋಡು ತಾಲೂಕು ಕಚೇರಿಯ ಪರಿಸರ ನಿವಾಸಿ ಪಿ. ಸುಹಾಸ್‌ರನ್ನು ನಗರ ಕೋಟೆ ರಸ್ತೆ ಬಳಿಯಿರುವ ಅವರ ಕಚೇರಿ ಬಳಿ ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು.

ಈ ನಾಲ್ಕು ಕೊಲೆ ಪ್ರಕರಣಗಳ ಪೈಕಿ ಸಂದೀಪ್ ಕೊಲೆ ಪ್ರಕರಣ ಮತ್ತು ಮೊಹಮ್ಮದ್ ಸಿನಾನ್ ಕೊಲೆ ಪ್ರಕರಣದ ಆರೋಪಿಗಳ ಮೇಲಿನ ಆರೋಪಗಳ ವಿಚಾರಣೆಗಳು ಸಾಬೀತು ಗೊಳ್ಳದ ಹಿನ್ನೆಲೆಯಲ್ಲಿ  ನ್ಯಾಯಾಲಯ ಅವರನ್ನು ಈ ಹಿಂದೆ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಪಿ. ಸುಹಾಸ್ ಕೊಲೆ ಪ್ರಕರಣದ ವಿಚಾರಣೆ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಈಗ ವಿಚಾರಣಾ ಹಂತದಲ್ಲಿದೆ.

Leave a Reply

Your email address will not be published. Required fields are marked *

You cannot copy content of this page