70.53 ಕೋಟಿ ರೂ.ಗಳ ಕಾಸರಗೋಡು ಬಂದರು ಅಭಿವೃದ್ಧಿ ಸಹಿತ ವಿವಿಧ ಯೋಜನೆಗಳಿಗೆ ಪ್ರಧಾನಮಂತ್ರಿ ಶಿಲಾನ್ಯಾಸ
ಕಾಸರಗೋಡು: ಕಾಸರಗೋಡು ಮೀನುಗಾರಿಕಾ ಬಂದರು (ಫಿಶ್ಶಿಂಗ್ ಹಾರ್ಬರ್) ಅಭಿವೃದ್ಧಿ ಹಾಗೂ ನವೀಕgಣೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಂದರು ಅಭಿವೃದ್ಧಿ ಯೋಜನೆಯ ನಿರ್ಮಾಣ ಕೆಲಸಗಳಿಗೆ ನಿನ್ನೆ ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಶಿಲಾನ್ಯಾಸ ನಡೆಸಿದರು.
ಇದರಂತೆ ಕಾಸರಗೋಡು ಸೇರಿದಂತೆ ಕೇರಳದಲ್ಲಿ ಐದು ಜಿಲ್ಲೆಗಳಲ್ಲಾಗಿರುವ ಬಂದರುಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಕೆಲಸಕ್ಕೆ ನಿನ್ನೆ ಚಾಲನೆ ದೊರಕಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪತ್ತು ಯೋಜನೆಯಂತೆ ರಾಜ್ಯದ ಈ ನಾಲ್ಕು ಯೋಜನೆಗಳ ನಿರ್ಮಾಣ ಕೆಲಸಕ್ಕೆ ರೂಪು ನೀಡಲಾ ಗಿದೆ. ಇದರಂತೆ ಕಾಸರಗೋಡು ಮೀನು ಗಾರಿಕಾ ಬಂದರನ್ನು ನವೀಕರಿಸಲು 70.53 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ವ್ಯಯಿಸಲಿದೆ. 3000 ಬೆಸ್ತರಿಗೆ ಇದರ ಪ್ರಯೋಜನ ಲಭಿಸಲಿದೆ. ಈ ಯೋಜನೆಗಾಗಿರುವ ಒಟ್ಟು ಮೊತ್ತದಲ್ಲಿ 42.3 ಕೋಟಿ ರೂ.ವನ್ನು ಕೇಂದ್ರ ಸರಕಾರ ಹಾಗೂ 10.58 ಕೋಟಿ ರೂ.ವನ್ನು ಮೀನುಗಾರಿಕಾ ಇಲಾಖೆ ನೀಡಲಿದೆ. ಮಂದಿನ 18ತಿಂಗಳೊಳಗೆ ಈ ಯೋಜನೆಯ ನಿರ್ಮಾಣ ಕೆಲಸ ಪೂರ್ಣಗೊಳ್ಳಲಿದೆ.
ಇದರ ಜತೆಗೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಮೀನುಗಾರಿಕಾ ಬಂದರಿನ ಆಧುನೀಕರಣಕ್ಕಾಗಿ 18.73 ಕೋಟಿ ರೂ., ಕಲ್ಲಿಕೋಟೆ ಜಿಲ್ಲೆಯ ಪುದಿಯಾಪು ಬಂದರಿನ ಆಧುನೀಕರ ಣಕ್ಕೆ 16.06 ಕೋಟಿ ರೂ., ಇದೇ ಜಿಲ್ಲೆಯ ಕೊಲಾಂಡಿ ಬಂದರಿನ ಆಧುನೀಕರ ಣಕ್ಕೆ 20.90 ಕೋಟಿ ರೂ., ಆಲಪ್ಪುಳ ಅರ್ತುಂಗಾಲ್ ಬಂದರಿನ ಅಭಿವೃದ್ಧಿಗಾಗಿ ೧೮೧ ಕೋಟಿ ರೂ. ಯೋಜನೆಗಳ ನಿರ್ಮಾಣ ಕೆಲಸಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಿದ್ದಾರೆ.
ವಿವಿಧ ರಾಜ್ಯಗಳಲ್ಲಾಗಿ ಒಟ್ಟಾರೆ 77,000 ಕೋಟಿ ರೂ.ಗಳ ಯೋಜನೆ ಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳನ್ನೂ ಇದೇ ಸಂದರ್ಭ ದಲ್ಲಿ ಪ್ರಧಾನಮಂತ್ರಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕೇಂದ ಸಚಿವರುಗಳಾದ ಜೋರ್ಜ್ ಕುರ‍್ಯನ್, ಸರ್ಬಾನಂದ್ ಸೋನುವಾಲ್, ರಾಜೀವ್‌ರಂಜನ್ ಸಿಂಗ್, ಎಸ್‌ಪಿ ಸಿಂಗ್ ಬಗೇಲ್, ಮಹಾರಾಷ್ಟ್ರ ಮುಖ್ಯ ಮಂತ್ರಿ ಏಕನಾಥ್ ಶಿಂಧೆ, ಅಲ್ಲಿನ ರಾಜ್ಯಪಾಲ ಸಿ.ಪಿ. ರಾಧಾ ಕೃಷ್ಣನ್, ಉಪಮುಖ್ಯಮಂತ್ರಿ ಅಜಿತ್ ಪವರ್, ಕೇರಳ ಬಂದರು ಖಾತೆ ಸಚಿವ ಸಜಿ ಚೆರಿಯಾನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು ಸೇರಿದಂತೆ ಹಲವು ಗಣ್ಯರು ಆನ್‌ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.