ಮೂಕನಾದ ಯುವಕನ ಆತ್ಮಹತ್ಯೆ ಯತ್ನ: 12ರ ಬಾಲಕಿಯ ಸಮಯಪ್ರಜ್ಞೆಯಿಂದ ಜೀವ ರಕ್ಷಿಸಿದ ಪೊಲೀಸರು
ಕಾಸರಗೋಡು: ಸ್ನೇಹಿತನಿಗೆ ವೀಡಿ ಯೋಕಾಲ್ ಮಾಡಿ ರೈಲ್ವೇ ಹಳಿಯಲ್ಲಿ ಮಲಗಿ ಆತ್ಮಹತ್ಯೆಗೆತ್ನಿಸಿದ ಮೂಕನಾದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಕಳೆದ ದಿನ ರಾತ್ರಿ 11.30ರ ವೇಳೆ ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ಗೆ 12ರ ಹರೆಯದ ಬಾಲಕಿಯೋರ್ವೆ ಫೋನ್ ಕರೆ ಮಾಡಿ ದ್ದಳು. “ತನ್ನ ತಂದೆ ಹಾಗೂ ತಾಯಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ತಂದೆಯ ಸ್ನೇಹಿತ ಹಾಗೂ ಪತ್ನಿ ಇದೇ ಸ್ಥಿತಿಯಲ್ಲಿದ್ದಾರೆ. ತಂದೆಯ ಸ್ನೇಹಿತ ಎಲ್ಲೋ ಒಂದು ಕಡೆ ರೈಲ್ವೇ ಹಳಿಯಲ್ಲಿ ಮಲಗಿ ತಂದೆಗೆ ವೀಡಿಯೋ ಕಾಲ್ ಮಾಡಿ ಆತ್ಮ ಹತ್ಯೆಗೈಯ್ಯುವುದಾಗಿ ಬೆದರಿಕೆಯೊಡ್ಡುತಿ ದ್ದಾನೆ.
ಹೇಗಾದರೂ ಮಾಡಿ ತಂದೆಯ ಸ್ನೇಹಿತನ ಜೀವ ರಕ್ಷಿಸಬೇಕು” ಎಂದು ಬಾಲಕಿ ವಿನಂತಿಸಿದ್ದಾಳೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೈಬರ್ ಸೆಲ್ನ ಸಹಾಯ ದೊಂದಿಗೆ ನಡೆಸಿದ ತನಿಖೆಯಲ್ಲಿ ಯುವಕ ರೈಲ್ವೇ ಹಳಿಯಲ್ಲಿ ಮಲಗಿರುವ ಸ್ಥಳ ಐಂಙೋ ತ್ ಎಂಬುದಾಗಿದೆ ಎಂದು ಪತ್ತೆಹಚ್ಚಿದ್ದಾರೆ. ಕೂಡಲೇ ನೀಲೇಶ್ವರ, ಕಾಞಂಗಾಡ್ ರೈಲ್ವೇ ನಿಲ್ದಾಣಗಳಿಗೆ ಕರೆ ಮಾಡಿ ರೈಲುಗಳನ್ನು ನಿಲ್ಲಿಸುವಂತೆ ತಿಳಿಸಲಾ ಯಿತು. ಈ ಮಧ್ಯೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ತೆರಳಿ ಯು ವಕನನ್ನು ಪತ್ತೆಹಚ್ಚಿ ಹಳಿಯಿಂದ ತೆರವುಗೊಳಿಸಿದ್ದಾರೆ. ಬಳಿಕ ಠಾಣೆಗೆ ತಲುಪಿಸಿ ತಿಳುವಳಿಕೆ ಮೂಡಿಸಿದ ಬಳಿಕ ಯುವಕನನ್ನು ಮನೆಯವರೊಂದಿಗೆ ಕಳುಹಿಸಿಕೊಡ ಲಾಯಿತು.12ರ ಹರೆಯದ ಬಾಲಕಿ ಸಂದರ್ಭೋಚಿತವಾಗಿ ನೀಡಿದ ಮಾಹಿತಿಯಿಂದ ಯುವಕನ ಜೀವ ರಕ್ಷಿಸಲು ಸಾಧ್ಯವಾಯಿತೆಂದು ಪೊಲೀಸರು ತಿಳಿಸಿದ್ದಾರೆ.