ಎಸ್.ವಿ. ಭಟ್ ಸದಾ ಸ್ಮರಣೀಯರು- ಬೇ.ಸೀ. ಗೋಪಾಲಕೃಷ್ಣ ಭಟ್

ನೀರ್ಚಾಲು : ಹೊನ್ನಾವರದಿಂದ ಬಂದು ಕಾಸರಗೋಡಿನಲ್ಲಿ ನೆಲೆಸಿದ ಎಸ್.ವಿ ಭಟ್ಟರು ಜಿಲ್ಲೆಯಲ್ಲಿ ನಡೆಸಿದ ಕನ್ನಡ ಸೇವೆ ಅನುಪಮವಾದದ್ದು. ಅವರ ಕನ್ನಡಾಭಿಮಾನ, ಕಾಸರಗೋ ಡಿನ ಕನ್ನಡಕ್ಕೆ, ಶೈಕ್ಷಣಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ವಿಶ್ರಾಂತ ಪ್ರಾಂಶುಪಾಲ ಬೇ. ಸೀ ಗೋಪಾಲಕೃಷ್ಣ ಭಟ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಸ್.ವಿ ಭಟ್‌ರ ಸಂಸ್ಮ ರಣೆ ಮಾಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯ ಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ಕೇರಳ ಸರಕಾರದ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾಧ್ಯಕ್ಷ ಡಾ. ಶ್ರೀಶ ಕುಮಾರ ಪಂಜಿತಡ್ಕ, ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ. ಕೆ, ನೀರ್ಚಾಲು ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಕಾಶ್ ಎಂ.ಕೆ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತಡ್ಕ, ಸಾಹಿತಿ ಡಾ. ಪ್ರಮೀಳಾ ಮಾಧವ, ವಿ.ಬಿ ಕುಳಮರ್ವ, ಜಯ ನಾರಾಯಣ ತಾಯನ್ನೂರು ಮೊದ ಲಾದವರು ಎಸ್ ವಿ. ಭಟ್ ಅವರ ಒಡನಾಟದ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಎಸ್.ವಿ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ಕಸಾಪ ಸಂಘಟನಾ ಕಾರ್ಯದರ್ಶಿ ರಾಮ ಚಂದ್ರ ಭಟ್ ಧರ್ಮತ್ತಡ್ಕ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ .ಎನ್ ಮೂಡಿತ್ತಾಯ ,ಡಾ .ಕೆ. ಕಮಲಾಕ್ಷ, ಡಾ . ಮಹೇಶ್ವರಿ .ಯು ,ಡಾ. ರತ್ನಾಕರ ಮಲ್ಲಮೂಲೆ, ಸಾಹಿತಿ ವೈ. ಸತ್ಯನಾರಾ ಯಣ ಕಾಸರಗೋಡು, ಬಿ. ರಾಮ ಮೂರ್ತಿ, ಬಾಲ ಮಧುರ ಕಾನನ, ಶಿವರಾಮ ಪಿ.ವಿ, ಶ್ಯಾಮ ಪ್ರಸಾದ್ ಕುಳಮರ್ವ , ಸುಕುಮಾರ ಆಲಂಪಾಡಿ, ಶಶಿಕಲಾ ಕಾಞಂಗಾಡು ನ್ಯಾಯವಾದಿ ಥೋಮಸ್ ಡಿ’ಸೋಜ, ಮೊಹಮ್ಮ ದಾಲಿ, ಸುಬ್ರಹ್ಮಣ್ಯ ಭಟ್, ಉದನೇಶವೀರ, ಸುಂದರ ಬಾರಡ್ಕ ಪಾಲೆÆ್ಗಂಡರು.
ಕಸಾಪ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ವಾಣಿ ಪಿ.ಎಸ್ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಧನ್ಯವಾದ ವಂದಿಸಿದರು.

You cannot copy contents of this page