ಕಾಪಾ ಕಾನೂನು ಉಲ್ಲಂಘನೆ: ಆರೋಪಿ ಸೆರೆ

ಕಾಸರಗೋಡು: ಕಾಪಾ ಕಾನೂನು ಉಲ್ಲಂಘಿಸಿ ಕಾಸರಗೋಡಿಗೆ ಬಂದ  ಆರೋಪಿಯನ್ನು  ಬೇಕಲ ಪೊಲೀಸರು ಬಂಧಿಸಿದ್ದಾರೆ. ಪೆರ್ಲ ಕನ್ನಾಡಿಪ್ಪಾರೆ ನಿವಾಸಿ ನವಾಸ್ ಶರೀಫ್ (34) ಬಂ ಧಿತ ಆರೋಪಿ. ನರಹತ್ಯೆ ಸೇರಿದಂತೆ ಆರರಷ್ಟು ಪ್ರಕರಣಗಳಲ್ಲಿ ಆರೋಪಿ ಯಾಗಿರುವ ನವಾಸ್ ಶರೀಫ್‌ನ ವಿರುದ್ಧ ಬದಿಯಡ್ಕ ಪೊಲೀಸರು ಕಳೆದ ಜೂನ್‌ನಲ್ಲಿ ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆರು ತಿಂಗಳ ತನಕ ಜಿಲ್ಲೆಗೆ ಪ್ರವೇಶಿಸಬಾರದೆಂಬ ನಿಬಂಧನೆಯನ್ನೂ ಪೊಲೀಸರು ಹೇರಿದ್ದರು. ಆದರೆ ಅದನ್ನು ಉಲ್ಲಂಘಿಸಿ ಆತ ನಿನ್ನೆ ಬೇಕಲ ಸಮೀಪದ ಪಾಲಕುನ್ನು ಕೋಡಿಪುರಕ್ಕೆ ಬಂದಿದ್ದನು. ಅಲ್ಲಿ ಆತನನ್ನು ಬೇಕಲ ಪೊಲೀಸರು ಕಂಡು ಕಾಪಾ ಕಾನೂನು ಉಲ್ಲಂಘಿಸಿದುದಕ್ಕೆ ಸಂಬಂಧಿಸಿ ಅಲ್ಲಿಂದ ಬಂಧಿಸಿದ್ದಾರೆ.

RELATED NEWS

You cannot copy contents of this page