ಕಾಸರಗೋಡು: ಕಂಟೈನರ್ ಲಾರಿಯಿಂದ ಮಾರ್ಬಲ್ ಇಳಿಸುತ್ತಿದ್ದ ವೇಳೆ ಅದು ಶರೀರದ ಮೇಲೆ ಬಿದ್ದು ವಲಸೆ ಕಾರ್ಮಿಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮಧ್ಯಪ್ರದೇಶ ಮೊರೋನಾ ನಿವಾಸಿ ಜಮೀನ್ ಖಾನ್ (42) ಸಾವನ್ನಪ್ಪಿದ ದುರ್ದೈವಿ. ನಿನ್ನೆ ಬೆಳಿಗ್ಗೆ ಬೇಕಲ ಮೀತ್ತಲ್ ಮೌವ್ವಲ್ನ ಮಸೀದಿಯೊಂ ದರ ಬಳಿ ಈ ದುರ್ಘಟನೆ ನಡೆದಿದೆ.
ಈ ಪರಿಸರದಲ್ಲಿ ಹೊಸ ಮನೆಯೊಂದನ್ನು ನಿರ್ಮಿಸಲಾಗುತ್ತಿದೆ. ಅದಕ್ಕೆ ಅಗತ್ಯವಿರುವ ಮಾರ್ಬಲ್ನ್ನು ಹೇರಿಕೊಂಡು ಬಂದ ಕಂಟೈನರ್ ಲಾರಿ ಆ ಮನೆ ಸಮೀಪಕ್ಕೆ ಸಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದರಿಂದ ಮಾರ್ಬಲ್ನ್ನು ಕಿರು ಲಾರಿಗೆ ಹೇರುತ್ತಿದ್ದ ವೇಳೆ ಅದು ಜಾರಿ ಜಮೀನ್ ಖಾನ್ನ ದೇಹದ ಮೇಲೆ ಬಿದ್ದಿದೆ. ಇವರ ಜತೆಗಿದ್ದ ಇತರ ಕಾರ್ಮಿಕರೂ ಆ ವೇಳೆ ಅನಾಹುತದಲ್ಲಿ ಸಿಲುಕಿಕೊಂಡಾಗ ಊರವರು ಸೇರಿ ಅವರನ್ನೆಲ್ಲಾ ರಕ್ಷಿಸಿದ್ದಾರೆ.
ಮಾರ್ಬಲ್ನ ಅಡಿ ಭಾಗದಲ್ಲಿ ಸಿಲುಕಿಕೊಂಡ ಜಮೀನ್ ಖಾನ್ನನ್ನು ಅಗ್ನಿಶಾಮಕದಳ ಹೊರತೆಗೆದು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಊರಿಗೆ ಸಾಗಿಸಲಾಯಿತು.