ಮುಳ್ಳೇರಿಯ: ಕರ್ಮಂತ್ತೋ ಡಿಯಲ್ಲಿ ನಿಲುಗಡೆಗೊಳಿಸಿದ್ದ ಕಾರು ಹೊತ್ತಿ ಉರಿದಿದೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕುತ್ತಿಕ್ಕೋಲ್ ಕೋಳಿಕ್ಕಾಲ್ ನಿವಾಸಿ ಬಿ. ಅಶೋಕ ಎಂಬವರ ಮಾಲಕತ್ವದ ಕಾರು ಸುಟ್ಟು ಭಸ್ಮವಾಗಿದೆ. ಕೆಎಸ್‌ಇಬಿ ಕುತ್ತಿಕ್ಕೋಲ್ ಸೆಕ್ಷನ್‌ನಲ್ಲಿ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿರುವ ಅಶೋಕ್ ಹಾಗೂ ಕುಟುಂಬ ಕರ್ಮಂತ್ತೋಡಿ ಕಾವೇರಿ ಸಭಾಂಗಣ ದಲ್ಲಿ ನಡೆದ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಲುಪಿದ್ದರು. ಚೆಂಗಳ-ಜಾಲ್ಸೂರು ಹೆದ್ದಾರಿಗೆ ಹೊಂದಿಕೊಂಡು ಸಭಾಂ ಗಣದ ಮುಂಭಾಗದಲ್ಲಿ ಕಾರನ್ನು ನಿಲ್ಲಿಸಿ ಇವರು ಕಾರ್ಯಕ್ರಮಕ್ಕೆ ತೆರಳಿದ್ದರು. ನಿಲುಗಡೆಗೊಳಿದ್ದ ವಾಹನದಿಂದ ಸಣ್ಣ ಮಟ್ಟಿನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಲಕನನ್ನು ಕಾರಿನ ಬಳಿಗೆ ಕರೆತಂದರಾದರೂ ಆವಾಗ ಕಾರು ಸಂಪೂರ್ಣ ಉರಿಯಲಾರಂ ಭಿಸಿತ್ತು. ಈ ಸಮಯದಲ್ಲಿ ಕಾರಿನ ಬಾಗಿಲು ತೆಗೆದು ವಾಹನದ ದಾಖಲೆ ಗಳನ್ನು ಹೊರತೆಗಿದ್ದರು. ಕಾವೇರಿ ಸಿನಿಮಾ ಮಂದಿರದ ಅಗ್ನಿಶಾಮಕ ವ್ಯವಸ್ಥೆಯನ್ನು ಉಪಯೋಗಿಸಿ ಬೆಂಕಿ ನಂದಿಸಲು ಯತ್ನಿಸಲಾಗಿತ್ತು. ಕಾಸರಗೋಡಿನಿಂದ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿತ್ತು. ಕಾರಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ವಾಹನ ಉರಿಯಲು ಕಾರಣವೆಂದು ಶಂಕಿಸಲಾಗಿದೆ.
