ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ಬೀದಿ ನಾಯಿಗಳ ಕಾಟ: ಸ್ಥಳೀಯರಲ್ಲಿ ಆತಂಕ
ಉಪ್ಪಳ: ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುAಟುಮಾಡಿದೆ. ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿ ನಾಯಿಗಳ ಹಿಂಡು ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿAದ ಶಿವಶಕ್ತಿ ಮೈದಾನದಲ್ಲಿ ನಿರಂತರವಾಗಿ ಸುಮಾರು 10ರಷ್ಟು ಅಲೆಮಾರಿ ನಾಯಿಗಳ ಹಿಂಡು ಈ ಪರಿಸರದ ಗಣೇಶ ಮಂದಿರ, ಗಾಯತ್ರಿ ಮಂದಿರ, ಗುಳಿಗ ಬನ ಪರಿಸರದಲ್ಲಿ ಅಲೆದಾಡುತ್ತಿದ್ದು, ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ದ್ವಿಚಕ್ರ ವಾಹನ ಸವಾರರನ್ನು, ನಡೆದು ಹೋಗುವವರನ್ನು ಬೆನ್ನಟ್ಟುತ್ತಿರುವುದಾಗಿ ದೂರಲಾಗಿದೆ. ಇದರಿಂದ ಈ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿ ಗಳು, ಮಹಿಳೆಯರ ಸಹಿತ ಊರವರು ಆತಂಕ ಗೊಂಡಿದ್ದಾರೆ. ಮೈದಾನದಲ್ಲಿ ದಾರಿ ದೀಪ ಉರಿಯದೆ ಇರುವುದರಿಂದ ರಾತ್ರಿ ಹೊತ್ತಲ್ಲಿ ಸಂಚರಿಸುವವರಿಗೆ ಆತಂಕ ಉಂಟಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.