ಓಣಂಗೆ 1.30 ಕೋಟಿ ಲೀಟರ್ ಹಾಲು ಮಿಲ್ಮಾ ಮಾರಾಟ

ಕಾಸರಗೋಡು: ಓಣಂ ಹಬ್ಬದ ಋತುವಿನಲ್ಲಿ ಹಾಲು, ಮೊಸರು ಮತ್ತಿತರ ಹಾಲು ಉತ್ಪನ್ನಗಳ ಮಾರಾಟದಲ್ಲಿ ಮಿಲ್ಮಾ ಈ ಬಾರಿ ದಾಖಲೆ ನಿರ್ಮಿಸಿದೆ. ತಿರುವೋಣಂದಿAದ ಮೊದಲ ಆರು ದಿನಗಳಲ್ಲಾಗಿ ಮಿಲ್ಮಾ 1,33,47,013 ಲೀಟರ್ ಹಾಲು ಮಾರಾಟ ಮಾಡಿದೆ. ಇದರ ಹೊರತಾಗಿ 4,95,332 ಕಿಲೋ ಮೊಸರನ್ನೂ ಮಾರಾಟ ಮಾಡಿದೆ. ಉತ್ರಾಡಂ ದಿನದಂದು ಮಾತ್ರವಾಗಿ 37,00,365 ಲೀಟರ್ ಹಾಲು ಮತ್ತು 3,91,576 ಕಿಲೋ ಮೊಸರು ಮಾರಾಟವಾಗಿದೆ. ಓಣಂ ದಿನದಂದು 1.25 ಕೋಟಿ ಲೀಟರ್ ಹಾಲು ಮಾರಾಟವಾಗುವ ನಿರೀಕ್ಷೆಯನ್ನು ಮಿಲ್ಮಾ ಇರಿಸಿತ್ತು. ಆ ನಿರೀಕ್ಷೆಯನ್ನು ಮೀರಿ 1.33 ಕೋಟಿ ಲೀಟರ್ ಹಾಲು ಮಾರಾಟವಾಗಿದೆ.
ಓಣಂ ಹಬ್ಬದ ಸಲುವಾಗಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ಮಿಲ್ಮಾ ಅಗತ್ಯದಷ್ಟು ಹಾಲು ಪಡೆದುಕೊಂಡಿತ್ತು. ಇದರ ಹೊರತಾಗಿ ಆಗಸ್ಟ್ 15ರಿಂದ ಸೆ.12ರ ತನಕದ ಅವಧಿಯಲ್ಲಿ 814 ಮೆಟ್ರಿಕ್ ಟನ್ ಮಿಲ್ಮಾ ತುಪ್ಪವೂ ಮಾರಾಟವಾಗಿದೆ. ಕಳೆದ ವರ್ಷದ ಓಣಂ ಹಬ್ಬದ ಅವಧಿಯಲ್ಲಿ ಮಿಲ್ಮಾ 1,00,56,889 ಲೀಟರ್ ಹಾಲು ಮಾರಾಟ ಮಾಡಿತ್ತು. ಅದಕ್ಕಿಂತ ಮೊದಲ ವರ್ಷ 94,56,621 ಲೀಟರ್ ಹಾಲು ಮಾರಾಟವಾಗಿತ್ತು. ಕಳೆದ ಓಣಂ ಹಬ್ಬದ ವೇಳೆ ನಾಲ್ಕು ದಿನಗಳಲ್ಲಿ 12,99,215 ಕಿಲೋ ಮೊಸಲು ಮಾರಾಟವಾಗಿತ್ತು. ಅದರ ಹಿಂದಿನ ವರ್ಷ ಮೊಸರು ಮಾರಾಟ 11,25,437 ಕಿಲೋ ಆಗಿತ್ತು.

You cannot copy contents of this page