ಅಪ್ರಾಪ್ತರಿಂದ ವಾಹನ ಚಾಲನೆ: ಎರಡು ಕೇಸು ದಾಖಲು

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯಪೂರ್ತಿಯಾಗದ ಮಕ್ಕಳು ದ್ವಿಚಕ್ರ ವಾಹನ ಚಲಾಯಿಸುತ್ತಿ ರುವುದು ವ್ಯಾಪಕಗೊಂಡಿದೆ. ನಿನ್ನೆ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಇಬ್ಬರು ಬಾಲ ಕರನ್ನು ಪತ್ತೆಹಚ್ಚಿ ಕೇಸು ದಾಖಲಿಸಿ ಕೊಂಡಿದ್ದಾರೆ. ಬಾಯಾರುಪದವು ನಿಂದ ಕೈಕಂಬ ಭಾಗಕ್ಕೆ ಬರುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ತಿಂಗಳಲ್ಲಿ ಮಾತ್ರ ಅಪ್ರಾಪ್ತರು ವಾಹನ ಚಲಾಯಿಸಿದ ಆರೋಪದಂತೆ ಒಟ್ಟು ೮ ಕೇಸುಗಳನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಾಯಪೂರ್ತಿಯಾಗದ ಮಕ್ಕಳು ವಾಹನ ಚಲಾಯಿಸಿದಲ್ಲಿ ಅವರ ರಕ್ಷಕರ ವಿರುದ್ಧ ಕೇಸು ದಾಖಲಿಸುವುದಾಗಿ ಪೊಲೀಸರು  ತಿಳಿಸಿದ್ದಾರೆ.

You cannot copy contents of this page