15 ವರ್ಷಕ್ಕಿಂತ ಹಳೆಯದಾದ 2200 ಬಸ್‌ಗಳು ಗುಜರಿಗೆ: ಸಂಕಷ್ಟದಲ್ಲಿ ಸಿಲುಕಿದ ಕೆ.ಎಸ್.ಆರ್.ಟಿ.ಸಿ

ಕಾಸರಗೋಡು: ಹದಿನೈದು ವರ್ಷಕ್ಕಿಂತ ಹಳೆಯದಾದ 2200 ಬಸ್‌ಗಳ ಸೇವೆ ನಿಲ್ಲಿಸಿ ಅವುಗಳನ್ನು ಗುಜರಿಗೆ ಕಳುಹಿಸಿಕೊಡಲು ಕೆಎಸ್‌ಆರ್‌ಟಿಸಿ  ತೀರ್ಮಾನಿಸಿದೆ. ಇದರಲ್ಲಿ 1200 ಆರ್ಡಿನರಿ ಬಸ್‌ಗಳು ಒಳಗೊಂಡಿದ್ದು, ಅವುಗಳ  ಸೇವಾವಧಿ ಮುಂದಿನ ತಿಂಗಳು ಪೂರ್ಣಗೊಂಡು ಬಳಿಕ ಗುಜರಿ ಸೇರಲಿದೆ. ಇದು ಕೆಎಸ್‌ಆರ್‌ಟಿಸಿಯನ್ನು ಅಗತ್ಯದಷ್ಟು ಬಸ್‌ಗಳಿಲ್ಲದೆ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿಸುವಂತೆ ಮಾಡಿದೆ.

ಗುಜರಿ ಸೇರಿರುವ ಬಸ್‌ಗಳಿಗೆ ಪರ್ಯಾಯವಾಗಿ ಅಗತ್ಯದಷ್ಟು ಬಸ್ ಖರೀದಿಸುವ ಆರ್ಥಿಕ ಸಾಮರ್ಥ್ಯ ಕೆಎಸ್‌ಆರ್‌ಟಿಸಿ  ಹೊಂದಿಲ್ಲ. ಇದಕ್ಕಾಗಿ ರಾಜ್ಯ ಸರಕಾರವನ್ನು ಆಶ್ರಯಿಸಬೇಕಾಗಿ ಬರಲಿದೆ. ಆದರೆ ರಾಜ್ಯ ಸರಕಾರವೇ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು ಅಗತ್ಯದ ಖರ್ಚಿಗೂ ಸಾಲ ಪಡೆಯಬೇಕಾದ ಸ್ಥಿತಿಯಲ್ಲಿ ಈಗಿದೆ. ಇದರಿಂದಾಗಿ ಹೊಸ ಬಸ್‌ಗಳ ಖರೀದಿಗೆ ಸರಕಾರ ಕೆಎಸ್‌ಆರ್‌ಟಿಸಿಗೆ ಅನುಮತಿ ನೀಡಿಲ್ಲ. ಪಿಎಂಇ ಬಸ್ ಸೇವಾ ಯೋಜನೆ ಪ್ರಕಾರ ಕೇರಳಕ್ಕೆ ಅಗತ್ಯದ ವಿದ್ಯುತ್ ಚಾಲಿತ ಬಸ್‌ಗಳನ್ನು ನೀಡಲು ಕೇಂದ್ರ ಸರಕಾರ ತಯಾರಾಗಿದ್ದರೂ ಆ ಬಗ್ಗೆಯೂ ರಾಜ್ಯ ಸರಕಾರ ಗಮನಹರಿಸಿಲ್ಲ.

Leave a Reply

Your email address will not be published. Required fields are marked *

You cannot copy content of this page