ವಾತಾವರಣದಲ್ಲಿ ವಿಶೇಷ ವಿದ್ಯಮಾನ : ಇಂದು, ನಾಳೆ ತಾಪಮಾನ ಹೆಚ್ಚಳ

ತಿರುವನಂತಪುರ: ವಾತಾವರಣದಲ್ಲಿ ಜರಗುವ ವಿಶೇಷ ವಿದ್ಯಾಮಾನದ ಹಿನ್ನೆಲೆ ಯಲ್ಲಿ ಸೂರ್ಯನ ರಶ್ಮಿ ನೇರವಾಗಿ ಭೂಮಿಗೆ ತಲುಪುವುದರಿಂ ದಾಗಿ ಇಂದು ಮತ್ತು ನಾಳೆ ತಾಪಮಾನ ಹೆಚ್ಚಲಿದೆ. ಮಳೆ ಮೋಡಗಳು ಇಲ್ಲದಿರುವುದೇ ಸೂರ್ಯರಶ್ಮಿ ನೇರವಾಗಿ ಭೂಮಿಗೆ ತಲುಪಲಿದ್ದು, ಇದು ತಾಪಮಾನ ಹೆಚ್ಚಾಗಲು ಕಾರಣವಾಗುತ್ತದೆ. ಸೂರ್ಯನು ಭೂಮಧ್ಯೆ ರೇಖೆಯ ಮೇಲೆ ತಲುಪಿದ ವೇಳೆ ಸೂರ್ಯರಶ್ಮಿ ನೇರವಾಗಿ ಭೂಮಿಗೆ ತಲುಪುವುದನ್ನು ಶರತ್ಕಾಲ ವಿಷ್ಠವಂ ಎಂದು ಕರೆಯಲಾಗುತ್ತದೆ. ಇದು ನಾಳೆಯಾಗಿದೆ. ಇದರಿಂದಾಗಿ ೨ರಿಂದ ೩ ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಹೆಚ್ಚಲಿದೆ. ನಾಳೆ ಹಗಲು ಮತ್ತು ರಾತ್ರಿಯ ಸಮಯ ಸಾಮಾನ್ಯವಾಗಿರುತ್ತದೆ.

You cannot copy contents of this page