ಮಹಿಳಾ ವಿಶ್ರಾಂತಿ ಕೇಂದ್ರ ನಾಳೆಯಿಂದ ಕಾರ್ಯಾರಂಭ

ಕಾಸರಗೋಡು: ಕಾಸರಗೋಡು ನಗರಸಭೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಮಹಿಳಾ ವಿಶ್ರಾಂತಿ ಕೇಂದ್ರ ಒಂದೂವರೆ ವರ್ಷದ ವಿಶ್ರಾಂತಿ ಬಳಿಕ ನಾಳೆ ತೆರೆದು ಕಾರ್ಯಾರಂಭಗೊಳ್ಳಲಿದೆ.

ಮಹಿಳಾ ಬಸ್ ಪ್ರಯಾಣಿಕರ, ವಿಶ್ರಾಂತಿ ಹಾಗೂ ಇತರ ಸೌಕರ್ಯಗಳಿಗಾಗಿ 18.88 ಲಕ್ಷ ರೂ. ವ್ಯಯಿಸಿ ಈ ವಿಶ್ರಾಂತಿ ಕೇಂದ್ರವನ್ನು ನಗರಸಭೆ ನಿರ್ಮಿಸಿದೆ. ವಿಶೇಷವಾಗಿ ತಮ್ಮ ಕಂದಮ್ಮಗಳಿಗೆ ಎದೆಹಾಲು ಉಣಿಸುವ ತಾಯಂ ದಿರಿಗೆ ಇದರಲ್ಲಿ ಪ್ರತ್ಯೇಕ ಸೌಕರ್ಯ ಏರ್ಪಡಿಸಲಾಗಿದೆ.

ಈ ಕಟ್ಟಡದ ನಿರ್ಮಾಣ ಕೆಲಸ ಪೂರ್ತಿಗೊಂಡು, 2022 ಡಿಸೆಂಬರ್ 31ರಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಈ ವಿಶ್ರಾಂತಿ ಕೇಂದ್ರವನ್ನು ಉದ್ಘಾಟಿಸಿದ್ದರು. ಆದರೆ ಆ ವೇಳೆ ಅಗತ್ಯದ ನೀರಿನ ಸೌಕರ್ಯ ಸಕಾಲದಲ್ಲಿ ಏರ್ಪಡಿಸದೇ ಇದ್ದ ಕಾರಣದಿಂದಾಗಿ ಅದನ್ನು ಉಪ ಯೋಗಕ್ಕಾಗಿ ತೆರೆದುಕೊಡದೆ ಕಳೆದ ಒಂದೂವರೆ ವರ್ಷದಿಂದ ಉಪ ಯೋಗಶೂನ್ಯವಾಗಿ ಮೂಲೆಗುಂ ಪಾಗಿತ್ತು.  ಅದಾದ ಒಂದೂವರೆ  ವರ್ಷ ವಿಶ್ರಾಂತಿ ಬಳಿಕ ಈ ಕೇಂದ್ರವನ್ನು ನಾಳೆಯಿಂದ ಉಪಯೋಗಕ್ಕಾಗಿ ಬಿಟ್ಟುಕೊಡಲು ನಗರಸಭೆ ಕೊನೆಗೂ ತೀರ್ಮಾನಿಸಿದೆ. ಅಗತ್ಯದ ನೀರಿನ ಸೌಕರ್ಯ ಇತ್ಯಾದಿಗಳನ್ನು ಈಗ ಏರ್ಪಡಿಸಲಾಗಿದೆ.

‘ಟೇಕ್ ಎ ಬ್ರೇಕ್’ ಎಂಬ ಯೋಜನೆ ಪ್ರಕಾರ ಎಲ್ಲಾ ಪ್ರಯಾಣಿಕರಿಗೆ ವಿಶ್ರಾಂತಿ ಪಡೆದುಕೊಳ್ಳುವ ಗುರಿಯೊಂದಿಗೆ ಈ ಕೇಂದ್ರ ನಿರ್ಮಿಸಲಾಗಿ ತ್ತಾದರೂ, ಬಳಿಕ ಅದನ್ನು ಕೇವಲ ಮಹಿಳಾ ಪ್ರಯಾಣಿಕರ ವಿಶ್ರಾಂತಿ ಕೇಂದ್ರವಾಗಿ ಸೀಮಿತಗೊಳಿ ಸಲಾಯಿತು.

Leave a Reply

Your email address will not be published. Required fields are marked *

You cannot copy content of this page