ಸೈನಿಕರು ಹಾಗೂ ಶಸ್ತ್ರಾಸ್ತ್ರ ಹೇರಿ ಕೇರಳಕ್ಕೆ ಬರುತ್ತಿದ್ದ ವಿಶೇಷ ರೈಲು ಬುಡಮೇಲು ಕೃತ್ಯ ಯತ್ನ: ರಕ್ಷಣಾ ಇಲಾಖೆ ಸೇರಿ ಕೇಂದ್ರ ತಂಡಗಳಿಂದ ಸಮಗ್ರ ತನಿಖೆ
ಹೊಸದಿಲ್ಲಿ: ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಹೇರಿ ಕೇರಳದ ತಿರುವನಂತಪುರಕ್ಕೆ ಬರುತ್ತಿದ್ದ ವಿಶೇಷ ರೈಲುಗಾಡಿ ಸಾಗುತ್ತಿದ್ದ ಹಳಿಯಲ್ಲಿ ಸ್ಫೋಟಕ ವಸ್ತು ಪತ್ತೆಯಾದುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ ಸಮಗ್ರ ತನಿಖೆ ಆರಂಭಿಸಿದೆ. ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ವಿಶೇಷ ರೈಲು ಹಾದುಹೋಗುತ್ತಿದ್ದ ಹಳಿಯಲ್ಲಿ ಸೆಪ್ಟಂಬರ್ 18ರಂದು ಸ್ಫೋಟಕ ವಸ್ತು ಪತ್ತೆಯಾಗಿತ್ತು. ಇದು ಬುಡಮೇಲು ಕೃತ್ಯವಾಗಿದೆ ಎಂಬ ಶಂಕೆ ವ್ಯಕ್ತಗೊಂಡಿದ್ದು, ಈ ಹಿನ್ನೆಲೆ ಯಲ್ಲಿ ತನಿಖೆಗೆ ರಕ್ಷಣಾ ಇಲಾಖೆ ಚಾಲನೆ ನೀಡಿದೆ. ರಾಷ್ಟ್ರೀಯ ತನಿಖಾ ಏಜೆನ್ಸಿ, ಉಗ್ರ ನಿಗ್ರಹ ದಳ ಸೇರಿದಂತೆ ವಿವಿಧ ಕೇಂದ್ರ ತನಿಖಾ ತಂಡಗಳು ಕೂಡಾ ತನಿಖೆ ಆರಂ ಭಿಸಿವೆ. ಸ್ಫೋಟಕ ವಸ್ತು ಪತ್ತೆಯಾದ ಸ್ಥಳಕ್ಕೆ ತನಿಖಾ ತಂಡಗಳು ತೆರಳಿ ಕೂಲಂಕಷವಾಗಿ ಪರಿಶೀಲನೆ ನಡೆಸಿವೆ. ಮಧ್ಯಪ್ರದೇಶದ ಸಪ್‌ಘರ್- ಡೋನ್‌ಗರ್‌ಗಾವ್ ರೈಲು ನಿಲ್ದಾಣಗಳ ಮಧ್ಯೆಗಿನ ರೈಲು ಹಳಿಯಲ್ಲಿ 10 ಮೀಟರ್ ಉದ್ದಕ್ಕೆ 10 ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂ ಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಮಧ್ಯೆ ರೈಲ್ವೇ ಸಿಗ್ನಲ್ ಮ್ಯಾನ್ ಮತ್ತು ಟ್ರ್ಯಾಕ್ ಮ್ಯಾನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರ ಣೆಗೊಳಪಡಿಸಿದ್ದಾರೆ. ಅವರನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಭಾರತೀಯ ಸೇನೆಯ ತನಿಖಾ ತಂಡ ಆಗ್ರಹಪಟ್ಟಿದೆ.