ಕೆ-ಫೋನ್ ಮೂಲಕ 200 ಕೋಟಿ ರೂ. ಆದಾಯ ನಿರೀಕ್ಷೆ

ಕಾಸರಗೋಡು: ರಾಜ್ಯ ಸರಕಾರ ತನ್ನದೇ ಆದ ಇಂಟರ್‌ನೆಟ್ ಸಂಪರ್ಕ ಯೋಜನೆಯಾದ ಕೆ-ಫೋನ್ ಮೂಲಕ 10,000 ಲ್ಯಾಂಡ್ ಲೈನ್ ಇಂಟರ್‌ನೆಟ್ ಸಂಪರ್ಕ ನೀಡುವ ಮೂಲಕ 200 ಕೋಟಿ ರೂ.ಗಳ ಆದಾಯ ನಿರೀಕ್ಷೆಯನ್ನು ಸರಕಾರ ಹಾಕಿಕೊಂಡಿದೆ.ಕಳೆದ ಏಳು ತಿಂಗಳಲ್ಲಿ ರಾಜ್ಯದಲ್ಲಿ 50,000ದಷ್ಟು ಇಂಟರ್‌ನೆಟ್ ಸಂಪರ್ಕವನ್ನು ಕೆ-ಯೋಜನೆ ಮೂಲಕ ನೀಡಲಾಗಿದೆ. ಕೆ-ಫೋನ್ ಯೋಜನೆ ಜ್ಯಾರಿಗೊಂಡ ಬಳಿಕ ಮೊದಲ ಹಂತದಲ್ಲಿ 27,122 ಗೃಹ ಸಂಪರ್ಕ ನೀಡಲಾಗಿದ್ದು, ಇದರಲ್ಲಿ ಅತೀ ಹೆಚ್ಚು ಎಂಬಂತೆ ಮಲಪ್ಪುರಂ ಜಿಲ್ಲೆಯಲ್ಲಿ 7,200 ಮನೆಗಳಿಗೆ ಇಂಟರ್‌ನೆಟ್ ಸಂಪರ್ಕ ನೀಡಲಾಗಿ ದೆ. ಇನ್ನು ಸರಕಾರಿ ಕಚೇರಿಗಳಿಗೆ ನೀಡಲಾಗಿರು ವ ಸಂಪರ್ಕಗಳ ಸಂಖ್ಯೆ ಸೇರಿದಂತೆ ಈಗ ಒಟ್ಟಾರೆ ಐವತ್ತು ಲಕ್ಷದಷ್ಟು ಇಂಟರ್‌ನೆಟ್  ಸಂಪರ್ಕ ನೀಡಲಾಗಿದೆ.ರಾಜ್ಯದ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಪ್ರದೇ ಶಗಳು ಶೇ.100ರಷ್ಟು ಇಂಟರ್‌ನೆಟ್ ಸಂಪರ್ಕ ನೀಡಲು ಸರಕಾರ ತೀರ್ಮಾನಿಸಿದೆ.

Leave a Reply

Your email address will not be published. Required fields are marked *

You cannot copy content of this page