ಬಟ್ಟೆತೊಳೆಯುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ
ಕಾಸರಗೋಡು: ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ವ್ಯಕ್ತಿ ಪರಾರಿಯಾದ ಘಟನೆ ನಡೆದಿದೆ. ವೆಳ್ಳೇರಿಕುಂಡ್ ಮಾಲೋಂ ಕಾರ್ಯೋಟ್‌ಚಾಲ್‌ನ ಜೋಸ್ ಎಂಬವರ ಪತ್ನಿ ಮಂಜು ಜೋಸ್ (34) ಎಂಬವರ ಕುತ್ತಿಗೆಯಿಂದ ಒಂದು ಪವನ್ ತೂಕದ ಚಿನ್ನವನ್ನು ಅಪಹರಿಸಲಾಗಿದೆ. ಯುವತಿ ನಿನ್ನೆ ಬಟ್ಟೆ ತೊಳೆಯುತ್ತಿದ್ದ ವೇಳೆ ಬೈಕ್‌ನಲ್ಲಿ ತಲುಪಿದ ವ್ಯಕ್ತಿ ಸರ ಎಗರಿಸಿದ್ದಾನೆಂದು ದೂರಲಾಗಿದೆ. ವೆಳ್ಳೇರಿಕುಂಡು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವ್ಯಕ್ತಿಯನ್ನು ಪತ್ತೆಹಚ್ಚಲು ಸಮೀಪ ಪ್ರದೇಶಗಳ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ.