ಮಾದಕ ದ್ರವ್ಯ ವಿರುದ್ಧ ಪೊಲೀಸ್ ಕಾರ್ಯಾಚರಣೆ ಅಭಿನಂದನಾರ್ಹ-ಡಿಫಿ
ಮಂಜೇಶ್ವರ: ಉಪ್ಪಳ ಪತ್ವಾಡಿಯಲ್ಲಿ ಮಾದಕ ದ್ರವ್ಯದ ವಿತರಣೆಗಾರ ಹಾಗೂ ವಿವಿಧ ಪ್ರದೇಶಗಳಲ್ಲಿ ಮಾದಕ ವ್ಯಾಪಾರ ನಡೆಸುವ ಪತ್ವಾಡಿ ನಿವಾಸಿ ಅಸ್ಕರ್ ಅಲಿಯನ್ನು ಬಂಧಿಸಿ ಮೂರು ಕೋಟಿಯಷ್ಟು ಮೌಲ್ಯದ ಡ್ರಗ್ಸ್ ವಶಪಡಿಸಿದ್ದು, ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ನಡೆಸುತ್ತಿರುವ ಪ್ರಯತ್ನ ಸ್ಲಾಗನೀಯವೆಂದು ಡಿವೈಎಫ್ಐ ಅಭಿನಂದಿಸಿದೆ. ಉಪ್ಪಳ, ಮಂಜೇಶ್ವರ ಪ್ರದೇಶಗಳಲ್ಲಿ ರಾತ್ರಿ ಸಮಯಗಳಲ್ಲೂ, ಶಾಲಾ, ಕಾಲೇಜು ಕೇಂದ್ರೀಕರಿಸಿ ಮಾದಕ ಪದಾರ್ಥ ಮಾಫಿಯಾ ನಡೆಯುತ್ತಿದೆಯೆಂದು ಆರೋಪಿಸಿ ಡಿಫಿ ಪ್ರತಿಭಟನೆ ನಡೆಸಿತ್ತು. ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು. ಈಗ ಬಂಧಿಸಿದ ಆರೋಪಿಗೆ ಕಠಿಣ ಶಿಕ್ಷೆ ಲಭಿಸುವಂತೆ ಮಾಡಬೇಕೆಂದು ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ಆಗ್ರಹಿಸಿದೆ.