ಜಮ್ಮು-ಕಾಶ್ಮೀರದಲ್ಲಿ ಎರಡನೇ ಹಂತದ ಮತದಾನ ಆರಂಭ

ಶ್ರೀನಗರ: ಕಣಿವೆ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಇಂದು ಬೆಳಿಗ್ಗೆ  ಎರಡನೇ ಹಂತದ ಮತ ದಾನ ಆರಂಭಗೊಂಡಿತು. ಆರಂಭದಲ್ಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಹಕ್ಕು ಚಲಾಯಿಸತೊಡ ಗಿದ್ದಾರೆ. ದ್ವಿತೀಯ ಹಂತದಲ್ಲಿ ಆರು ಜಿಲ್ಲೆಗಳ 26 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು,  ಒಟ್ಟು 26 ಲಕ್ಷ ಮತದಾರರು ಕಣದಲ್ಲಿರುವ 239 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿ ದ್ದಾರೆ. ಮತದಾನ ನಡೆಯುವ ಕೆಲವು ಕ್ಷೇತ್ರಗಳಲ್ಲಿ ಪ್ರತ್ಯೇಕವಾದಿಗಳ ಪ್ರಾಬಲ್ಯವಿದ್ದು, ಇಂತಹ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.  ಸೆ. 18ರಂದು ಜಮ್ಮು-ಕಾಶ್ಮೀರದ ಏಳು ಜಿಲ್ಲೆಗಳ 24 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿದೆ. ಈತನಕದ ವರದಿ ಪ್ರಕಾರ ಎಲ್ಲೆಡೆ ಶಾಂತಿಯುತವಾಗಿ ಚುನಾವಣೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page