ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಮೂಲ ಸ್ಥಳದಲ್ಲಿ ಅಷ್ಟಮಂಗಲ ಪಶ್ನೆಚಿಂತನೆ

ಬದಿಯಡ್ಕ: ವಾಂತಿಚ್ಚಾಲ್ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಅಟ್ಟೆಪ್ಪಾಡಿಕಲ್ಲು ಆದಿಮೂಲ ಬನವಿರುವ ಸ್ಥಳದಲ್ಲಿ ಜೀರ್ಣೋದ್ಧಾರದ ಬಗ್ಗೆ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಯಿತು. ದೈವಜ್ಞರಾಗಿ ಶಶಿಧರನ್ ಮಾಂಙಾಡ್, ರಾಜೇಶ್ ಎರಿಯ, ಕೇಶವ ಭಟ್ ನೆಲ್ಲಿಕಳಯ, ಸೂರಜ್ ನೀಲೇಶ್ವರ ಭಾಗವಹಿಸಿದರು. ಟ್ರಸ್ಟ್‌ನ ಅಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ಮೂಲ ಬನದ ಸ್ಥಳವನ್ನು ಖರೀದಿಸಿ ಕನ್ಯಾನ ಸದಾಶಿವ ಶೆಟ್ಟಿ ಟ್ರಸ್ಟ್‌ಗೆ ದಾನ ರೂಪವಾಗಿ ನೀಡಿದ್ದು, ಇಲ್ಲಿ ಜೀರ್ಣೋದ್ಧಾರ ನಡೆಸುವ ಬಗ್ಗೆ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಲಾಗಿದೆ. ಟ್ರಸ್ಟ್‌ನ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಡಾ| ಶ್ರೀನಿಧಿ ಸರಳಾಯ, ಗೋಪಾಲಕೃಷ್ಣ ಪೈ ಬದಿಯಡ್ಕ, ಜಗನ್ನಾಥ ರೈ ಕೊರೆಕ್ಕಾನ, ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮ ನಾಯ್ಕ ಕುಂಟಾಲುಮೂಲೆ, ಶಿವರಾಮ ಸಾಲ್ಯಾನ್ ವಾಂತಿಚ್ಚಾಲು, ಸುಕುಮಾರ ಉಪ್ಲೇರಿ, ರಮೇಶ ನಾಯ್ಕಾಪು,  ಆನಂದ ಬೈಕುಂಜ, ತಾರಾನಾಥ ರೈ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರದೀಪ್ ಕಳತ್ತೂರು, ಜಯರಾಮ ಪಾಟಾಳಿ ಪಡುಮಲೆ ಉಪಸ್ಥಿತರಿದ್ದರು.

You cannot copy contents of this page