ಮಳೆಗೆ ಶೋಚನೀಯಗೊಂಡ ಉಪ್ಪಳ-ಆರಿಕ್ಕಾಡಿ ಮಧ್ಯೆಗಿನ ಸರ್ವೀಸ್ ರಸ್ತೆ

ಉಪ್ಪಳ: ಮಳೆಗಾಲ ಮುಂದುವರಿಯುತ್ತಿರುವಂತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿರುವಂತೆ ರಸ್ತೆಗಳು ಹದಗೆಟ್ಟು ಶೋಚನೀಯಾವಸ್ಥೆಗೆ ತಲುಪಿ ವಾಹನ ಸಂಚಾರಕ್ಕೆ ದುಸ್ತರವಾಗುತ್ತಿವೆ. ಉಪ್ಪಳ-ಆರಿಕ್ಕಾಡಿ ಮಧ್ಯೆ ನಿರ್ಮಾಣ ಹಂತದಲ್ಲಿರುವ ಎರಡು ಕಡೆಗಳ ಸರ್ವೀಸ್ ರಸ್ತೆ ಮಳೆಗೆ ಹದಗೆಟ್ಟು ಹೊಂಡಗಳಿಂದಾಗಿ ವಾಹನಗಳ ಸಂಚಾರ ಕಷ್ಟಕರವಾಗಿದೆ. ವಾಹನಗಳು ನಿಧಾನಗತಿಯಲ್ಲಿ ಸಂಚರಿಸಬೇಕಾಗುತ್ತಿದ್ದು, ಇದರಿಂದ ಉಪ್ಪಳ, ಆರಿಕ್ಕಾಡಿ ಸಹಿತ ವಿವಿಧ ಕಡೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬರುತ್ತಿದೆ. ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಗುತ್ತಿವೆ. ಬಸ್, ಆಟೋ ರಿಕ್ಷಾ, ಟ್ಯಾಕ್ಸಿ, ಟೆಂಪೋ ಚಾಲಕರು ಸಹಿತ ವಾಹನ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ವೀಸ್ ರಸ್ತೆಯನ್ನು ಯೋಗ್ಯ ರೀತಿಯಲ್ಲಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ

RELATED NEWS

You cannot copy contents of this page