ಸಿಪಿಎಂ ಪ್ರಧಾನ ಕಾರ್ಯದರ್ಶಿ  ಸ್ಥಾನಕ್ಕೆ ತಾತ್ಕಾಲಿಕ ನೇಮಕ ಸಾಧ್ಯತೆ

ದೆಹಲಿ: ತೆರವುಗೊಂಡಿರುವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ  ಯಾರನ್ನೂ ನೇಮಿಸಬೇಕಾಗಿಲ್ಲವೆಂದು  ಸಿಪಿಎಂ ನಿರ್ಧರಿಸಿದೆ. ತಾತ್ಕಾಲಿಕವಾಗಿ ಒಬ್ಬರಿಗೆ ಅದರ ಹೊಣೆಗಾರಿಕೆ ನೀಡುವ ವಿಷಯ ಮಾತ್ರವೇ ಪರಿಗಣನೆ ಯಲ್ಲಿದೆಯೆಂದು ನಾಯಕತ್ವ ಸ್ಪಷ್ಟಪಡಿಸಿದೆ.

ಪಾರ್ಟಿ ಕಾಂಗ್ರೆಸ್ ನೂತನ ಪ್ರಧಾನ ಕಾರ್ಯ ದರ್ಶಿಯನ್ನು ಆರಿಸಲಿದೆಯೆಂದು  ತಿಳಿಸಲಾಗಿದೆ.  ಪ್ರಕಾಶ್ ಕಾರಾಟ್ ಅಥವಾ ವೃಂದಾ ಕಾರಾಟ್‌ರನ್ನು ತಾತ್ಕಾಲಿಕವಾಗಿ  ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲು ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷದ ಪಿಬಿ ಸಭೆ ನಾಳೆಯಿಂದ ದಿಲ್ಲಿಯಲ್ಲಿ ನಡೆಯಲಿದ್ದು, ಈ ವಿಷಯದಲ್ಲಿ ಸೂಕ್ತ ತೀರ್ಮಾನ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

You cannot copy contents of this page