ಅರ್ಜುನ್ ಮೃತದೇಹ ಕುಟುಂಬಕ್ಕೆ ಹಸ್ತಾಂತರ ವಿಳಂಬ ಸಾಧ್ಯತೆ

ಮಂಗಳೂರು: ಕಾರವಾರ ಸಮೀಪ ಶಿರೂರಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ಮೃತಪಟ್ಟ ಕಲ್ಲಿಕೋಟೆ ಕಣ್ಣಾಡಿಕ್ಕಲ್ ನಿವಾಸಿ ಅರ್ಜುನ್‌ರ ಮೃತದೇಹದ ಅವಶಿಷ್ಟಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲು ವಿಳಂಬವಾಗ ಲಿದೆಯೆಂದು ತಿಳಿದುಬಂದಿದೆ. ಇಂದು ಸಂಜೆ ವೇಳೆಗೆ ಡಿಎನ್‌ಎ ಹೊಂದಾಣಿಕೆ ತಪಾಸಣೆ ಪೂರ್ತಿಗೊ ಳಿಸಿ ಮೃತದೇಹ ವನ್ನು ಸಂಬಂಧಿಕರಿಗೆ ಹಸ್ತಾಂತ ರಿಸಲು  ಕ್ರಮಕೈಗೊಂ ಡಿರುವು ದಾಗಿ ಜಿಲ್ಲಾಡಳಿತ ತಿಳಿಸುತ್ತಿದೆ.  ಅರ್ಜುನ್‌ರ ಸಹೋದರ ಅಭಿ ಜಿತ್‌ರ ಡಿಎನ್‌ಎ ಸ್ಯಾಂಪಲ್ ಸಂಗ್ರಹಿಸಿ ಅದನ್ನು ಹೋಲಿಕೆ ಮಾಡಲು ಸಿದ್ಧಪಡಿಸಲಾಗಿದೆ. ಇಬ್ಬರ ಡಿಎನ್‌ಎ ಹೋಲಿಕೆಯಾ ದಲ್ಲಿ ತಕ್ಷಣ ಮೃತದೇಹ ಅವಶಿಷ್ಟಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.

You cannot copy contents of this page