ಕೊಡುವಳ್ಳಿಯಲ್ಲಿ ಕಾರು ಅಪಘಾತ: ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು; ಮೃತದೇಹ ಇಂದು ಊರಿಗೆ
ಕುಂಬಳೆ: ಕಲ್ಲಿಕೋಟೆ ಬಳಿಯ ಕೊಡುವಳ್ಳಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಂದ್ಯೋಡು ನಿವಾಸಿ ಯುವತಿ ಮೃತಪಟ್ಟರು. ಮೇರ್ಕಳ ಪರಪ್ಪ ಹೌಸ್ನ ಸಿದ್ದಿಕ್ರ ಪತ್ನಿ ತಸ್ಲಿಮ (28) ನಿನ್ನೆ ರಾತ್ರಿ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿ ದ್ದಾರೆ. ಅಪಘಾತದಲ್ಲಿ ಗಾಯ ಗೊಂಡ ತಸ್ಲೀಮರ ಸಹೋದರ ಅಬ್ದುಲ್ ಜಮಾಲ್ (27), ಸಂಬಂಧಿಕೆ ಕುಂಞಾಲಿಮ (30) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ, ತಸ್ಲೀಮರ ಮಕ್ಕಳಾದ ತಸ್ಫಿಯ(8), ಫಾತಿಮ (4) ಎಂಬಿವರನ್ನು ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ತಿಂಗಳ 24ರಂದು ವಯನಾಡ್ನ ಲ್ಲಿರುವ ಸಂಬಂಧಿಕರ ಅಂಗಡಿಗೆ ಭೇಟಿ ನೀಡಿದ ಬಳಿಕ ಅಂದು ರಾತ್ರಿ ಮಡವೂರು ದರ್ಗಾ ಸಂ ದರ್ಶಿಸಲು ತೆರಳುತ್ತಿದ್ದಾಗ ಇವರು ಪ್ರಯಾಣಿಸು ತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಅಪಘಾತ ಸಂಭವಿಸಿದೆ. ಜಮಾಲ್ ಕಾರು ಚಲಾಯಿಸುತ್ತಿದ್ದರೆ ನ್ನಲಾಗಿದೆ. ತಸ್ಲಿಮರ ಮೃತದೇಹವನ್ನು ಇಂದು ಊರಿಗೆ ತಲುಪಿಸಲಾಗುವು ದೆಂದು ಸಂಬಂಧಿಕರು ತಿಳಿಸಿದ್ದಾರೆ. ತಸ್ಲಿಮರ ಪತಿ ಸಿದ್ದಿಕ್ ಸೌದಿ ಉದ್ಯೋಗಿಯಾಗಿದ್ದು, ದುರ್ಘಟನೆ ಬಗ್ಗೆ ತಿಳಿದು ಅವರು ಊರಿಗೆ ಪ್ರಯಾಣ ಹೊರಟಿದ್ದಾರೆ.