ಔಷಧ ಸಹಿತ ನೂರು ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಸಿದ್ಧತೆ

ದೆಹಲಿ: ಹಣದುಬ್ಬರದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಅಲ್ಪ ನೆಮ್ಮದಿ ತರಲು ಔಷಧ, ಬೈಕ್ ಸೇರಿದಂತೆ  ನೂರು ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಕೇಂದ್ರಸರಕಾರ ಸಿದ್ಧತೆ ನಡೆಸಿದೆ.

ಆ ಮೂಲಕ ಕೇಂದ್ರ ಸರಕಾರ ಸರಕು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಸುಧಾರಿಸುವ ಪ್ರಯತ್ನವನ್ನೂ ತೀವ್ರಗೊಳಿಸಿದೆ. ಇದರಂತೆ ನೂರು ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಪರಿಷ್ಕರಿಸುವ  ಯೋಜನೆ ಕೇಂದ್ರ ಸರಕಾರ ಹಾಕಿಕೊಂಡಿದೆ.

ಜಿಎಸ್‌ಟಿ ದರವನ್ನು ಶೇಕಡಾ 12ರಿಂದ ಶೇ. 5ಕ್ಕಿಳಿಸುವ ಚಿಂತನೆ ನಡೆಸಲಾಗುತ್ತಿದೆ.  ಮುಂದಿನ ತಿಂಗಳಿನಿಂದ ವಿದ್ಯುಕ್ತವಾಗಿ  ಜ್ಯಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಆ ಮೂಲಕ  ಇದನ್ನು ದೀಪಾವಳಿ ಕೊಡುಗೆಯನ್ನಾಗಿ ನೀಡಲು ಕೇಂದ್ರ ಬಯಸಿದೆ.

RELATED NEWS

You cannot copy contents of this page