ಜಿಲ್ಲಾ ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಹಾಯ ಧನ ವಿತರಣೆ 6ರಂದು

ಕಾಸರಗೋಡು: ಜಿಲ್ಲಾ ಬಂಟರ ಸಂಘದ ಶಿಕ್ಷಣ ಸಹಾಯ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಅಕ್ಟೋಬರ್ 6ರಂದು ಬೆಳಿಗ್ಗೆ 10.30ಕ್ಕೆ ಉಪ್ಪಳ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ನಡೆಯಲಿದೆ. ಬಂಟರ ಯಾನೆ ನಡಾವರ ಮಾತೃಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸುವರು. ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭ ಶೇಖ, ಉದ್ಯಮಿ ತಿಂಬರ ಸಂಜೀವ ಶೆಟ್ಟಿ ಅತಿಥಿಗಳಾಗಿರುವರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ. ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸುವರು.

ಮಾಜಿ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಮಂಜೇಶ್ವರ ಪಿರ್ಕಾ ಬಂಟರ ಸಂಘದ ಅಧ್ಯಕ್ಷ ದಾಸಣ್ಣ ಆಳ್ವ ಕುಳೂರುಬೀಡು, ಕಾಸರಗೋಡು ವಲಯ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಕುಂಬಳೆ ಪಿರ್ಕಾ ಬಂಟ್ಸ್ ಸರ್ವೀಸ್ ಸೊಸೈಟಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಭಾಗವಹಿಸುವರು.

RELATED NEWS

You cannot copy contents of this page