ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ 4ನೇ ತರಗತಿ ವಿದ್ಯಾರ್ಥಿನಿ ಮೃತ್ಯು
ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಉದುಮ ಕೋ ಕಾಲ್‌ನ ಹಳೆ ದಿನೇಶ್ ಬೀಡಿ ಕಂಪೆನಿ ಸಮೀಪದ ರಿಜೇಶ್-ಸಿತಾರ (ಗ್ರೀನ್ ವುಡ್ಸ್ ಶಾಲಾ ಅಧ್ಯಾಪಿಕೆ) ದಂಪತಿಯ ಪುತ್ರಿ ಕೆ. ಸಾತ್ವಿಕ (9) ಮೃತಪಟ್ಟ ಬಾಲಕಿ. ಉದುಮ ಸರಕಾರಿ ಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದಳು. ಮೂರು ದಿನಗಳ ಹಿಂದೆ ಈಕೆಗೆ ಜ್ವರ ಬಾಧಿಸಿತ್ತು. ಜ್ವರ ವಾಸಿಯಾಗುತ್ತಾ ಬರುತ್ತಿದ್ದಂತೆ ನಿನ್ನೆ ಸಂಜೆ ತೀವ್ರ ಸುಸ್ತು ಅನುಭವಗೊಂಡ ಬಾಲಕಿಯನ್ನು ಕಾಸರೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಆದರೆ ಚಿಕಿತ್ಸೆ ಮಧ್ಯೆ ರಾತ್ರಿ 12 ಗಂಟೆ ವೇಳೆ ಬಾಲಕಿ ಮೃತಪಟ್ಟಳು. ಶಿಕ್ಷಣದ ಜೊತೆಗೆ ನೃತ್ಯ, ಚಿತ್ರಬಿಡಿಸುವುದರಲ್ಲಿ ಸಾತ್ವಿಕ ಉತ್ತಮ ಸಾಧನೆ ತೋರಿದ್ದಳು. ಈಕೆಯ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಮೃತ ಬಾಲಕಿ ತಂದೆ, ತಾಯಿ, ಸಹೋದರ ರಿತುನ್ (ಉದುಮ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ). ಮೃತದೇಹವನ್ನು ಇಂದು ಉದುಮ ಸರಕಾರಿ ಎಲ್‌ಪಿ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಗುವುದು.