ಕುಂಬಳೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ: ಪೊಲೀಸ್ ಲಾಠಿ ಪ್ರಯೋಗ
ಕುಂಬಳೆ: ಶಾಲಾ ಕ್ರೀಡಾ ಮೇಳ ನಡೆಯುತ್ತಿರುವ ಮಧ್ಯೆ ವಿದ್ಯಾರ್ಥಿಗಳು ಕಾದಾಟ ನಡೆಸಿದರು. ಮಾಹಿತಿ ತಿಳಿದು ತಲುಪಿದ ಪೊಲೀಸರು ಲಾಠಿ ಬೀಸಿದುದರಿಂದ ವಿದ್ಯಾರ್ಥಿಗಳು ಚದುರಿದರು. ನಿನ್ನೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ಘಟನೆ ನಡೆದಿದೆ. ಶಾಲೆಯಲ್ಲಿ ಕ್ರೀಡಾ ಮೇಳ ನಡೆಯುತ್ತಿದ್ದ ಮಧ್ಯೆ ಹೊರಗಿ ನಿಂದ ಬಂದ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ಉಂಟಾಗಿದ್ದು, ಅದು ಬಳಿಕ ಘರ್ಷಣೆಗೆ ತಿರುಗಿದೆಯೆನ್ನಲಾಗಿದೆ. ವಿದ್ಯಾರ್ಥಿಗಳು ಗುಂಪು ಘರ್ಷಣೆ ಯಲ್ಲಿ ತೊಡಗಿರುವುದರೊಂದಿಗೆ ಪೊಲೀಸರು ತಲುಪಿ ಲಾಠಿ ಬೀಸಿ ವಿದ್ಯಾರ್ಥಿಗಳನ್ನು ಚದುರಿಸಿದರು. ಈ ವೇಳೆ ವಿದ್ಯಾರ್ಥಿಗಳು ಅಂಗಡಿಗಳಿಗೆ ಓಡಿ ನುಗ್ಗಿ ಲಾಠಿಯಿಂದ ಪಾರಾಗಿದ್ದಾರೆ.