ಕಾಸರಗೋಡು: ಕೇರಳ ಅಡ್ವಕೇಟ್ ಕ್ಲರ್ಕ್ಸ್ ಅಸೋಸಿಯೇಶನ್ ಕಾಸರಗೋಡು ಯೂನಿಟ್ ಸಮ್ಮೇಳನ ಹಾಗೂ ನಿವೃತ್ತಿಹೊಂದಿದ ಸದಸ್ಯರಿಗೆ ಬೀಳ್ಕೊಡುಗೆ ನಿನ್ನೆ ಕಾಸರಗೋಡು ಪಬ್ಲಿಕ್ ಸರ್ವೆಂಟ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಜಿಲ್ಲಾ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ಉದ್ಘಾಟಿಸಿದರು. ಅಸೋಸಿಯೇಶನ್ ಕಾಸರಗೋಡು ಯೂನಿಟ್ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಯೂನಿಟ್ ಕಾರ್ಯದರ್ಶಿ ಕಮಲಾಕ್ಷ ಕೆ ಸ್ವಾಗತಿಸಿದರು. ನಿವೃತ್ತಿ ಹೊಂದಿದ ಶ್ಯಾಂ ಭಟ್, ಗಣೇಶ್ ಬಸರಿತ್ತಾಯರನ್ನು ಗೌರವಿಸಲಾಯಿತು. ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
