ಜನಜಾಗೃತಿ ವೇದಿಕೆಯಿಂದ ಗಾಂಧೀ, ಶಾಸ್ತ್ರಿ ಜನ್ಮ ದಿನಾಚರಣೆ

ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಬದಿಯಡ್ಕ ವಲಯದ ಆಶ್ರಯದಲ್ಲಿ ಮಹಾತ್ಮಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಬದಿಯಡ್ಕ ಜನಮೈತ್ರಿ ಪೊಲೀಸ್ ಅಧಿಕಾರಿ ಶಿನು ಪುಷ್ಪಾರ್ಚನೆ ನಡೆಸಿದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಖೇಶ್, ರೋಟರಿ ಕ್ಲಬ್ ಬದಿಯಡ್ಕ ಅಧ್ಯಕ್ಷ ಕೇಶವ ಪಾಟಾಳಿ, ಸಾಮಾಜಿಕ ಮುಖಂಡ ನಾರಾಯಣ ನಂಬ್ಯಾರ್ ಏತಡ್ಕ, ಅವಿನಾಶ್ ರೈ ಬದಿಯಡ್ಕ, ಪ್ರತೀಕಾ ಮವ್ವಾರು, ಜಯರಾಮ ಪಾಟಾಳಿ ಪಡುಮಲೆ, ಸುಧಾಕರ, ತಾರಾನಾಥ ರೈ, ಲೋಹಿತಾಕ್ಷ ಹಾಗೂ ವಿವಿಧ ಸಮಿತಿಯ ಗಣೇಶ್, ಕವಿತಾ ಗಿರೀಶ್ ರೈ, ಕಮಲಾಕ್ಷಿ, ಗೋಪಾಲಕೃಷ್ಣ ಭಾಗವಹಿಸಿದರು.

You cannot copy contents of this page