ಹೊಸದುರ್ಗ: ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಹಣ ಪಡೆದು ವಂಚಿಸಿದ ಆರೋಪದಂತೆ ಓರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ನೀಲಂಕರ ಬಿ.ಕೆ. ಹೌಸ್‌ನ ಪಳೆಯಪಾಟಿಲ್ಲತ್ ಅಶ್ರಫ್ ಎಂಬಾತನನ್ನು ಹೊಸದುರ್ಗ ಠಾಣೆ ಎಸ್‌ಐ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗದಲ್ಲಿರುವ ಹೊಸದುರ್ಗ ಸೇವಾ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ 25.470 ಗ್ರಾಂ ನಕಲಿ ಚಿನ್ನಾಭರಣ ಅಡವಿರಿಸಿ 1,17,000 ರೂ. ಪಡೆದು ಅಶ್ರಫ್ ವಂಚಿಸಿದ್ದಾನೆಂದು ಆರೋಪಿಸಲಾಗಿದೆ. 2024 ಎಪ್ರಿಲ್ 4ರಂದು ಈತ ಚಿನ್ನಾಭರಣ ಅಡವಿರಿಸಿದ್ದನು. ಅನಂತರ ನಡೆದ ಪರಿಶೀಲನೆಯಲ್ಲಿ ಅಡವಿರಿಸಿದ ಚಿನ್ನ ನಕಲಿ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಅಸಿಸ್ಟೆಂಟ್ ಸೆಕ್ರೆಟರಿ ಪ್ರದೀಪ್ ಕೆ. ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
