ಚಂದ್ರಗಿರಿ ರಸ್ತೆ ನವೀಕರಣೆ ಪೂರ್ಣ: ನಾಳೆಯಿಂದ ಸಾರಿಗೆ ಸಂಚಾರ ಪುನರಾರಂಭ
ಕಾಸರಗೋಡು: ನಗರದ ಚಂದ್ರಗಿರಿ ರಸ್ತೆ ತಿರುವಿನಿಂದ ಆರಂಭಗೊಂಡು ರಾಜ್ಯ ಹೆದ್ದಾರಿಯ ನವೀಕರಣ ಕೆಲಸ ಈಗ ಪೂರ್ಣಗೊಂಡಿದೆ. ಚರಂಡಿ ಕೆಲಸ ಮಾತ್ರವೇ ಈಗ ನಡೆಯುತ್ತಿದ್ದು. ಆ ಕೆಲಸ ಇಂದು ಪೂರ್ಣಗೊಳ್ಳಲಿದೆ. ನಾಳೆಯಿಂದ ಈ ರಸ್ತೆಯನ್ನು ಮತ್ತೆ ವಾಹನ ಸಂಚಾರಕ್ಕಾಗಿ ತೆರೆದು ಕೊಲಾಗುವುದೆಂದು ಲೋಕೋಪಯೋಗಿ ಇಲಾಖೆಯ (ರಸ್ತೆ ವಿಭಾಗ) ಇಂಜಿನಿಯರ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 6.30ರಿಂದ ಈ ರಸ್ತೆಯನ್ನು ಮತ್ತೆ ಸಾರಿಗೆ ಸಂಚಾರಕ್ಕಾಗಿ ತೆರೆದುಕೊಡ ಲಾಗುವುದೆಂದೂ ಅವರು ತಿಳಿಸಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಇಂಜಿನಿಯರ್ ಜಿಲ್ಲಾಧಿಕಾರಿಗೆ ಈಗಾ ಗಲೇ ನೀಡಿದ್ದಾರೆ. ಈ ರಸ್ತೆ ನವೀಕರಣೆಯ ಆರಂಭಗೊಂಡ ದಿನದಿಂದ ವಾಹನಗಳ ಸಂಚಾರ ಬೇರೆ ದಾರಿ ಮೂಲಕ ಬದಲಾಯಿಸಲಾಗಿತ್ತು. ನಾಳೆಯಿಂದ ಮತ್ತೆ ಹಳೇ ರೀತಿಗೆ ಮರಳಲಿದೆ.