ಕನ್ನೆಪ್ಪಾಡಿ ಆಶ್ರಮದಲ್ಲಿ ಶಾರದಾ ಟೀಚರ್ ಪುಣ್ಯಸ್ಮರಣೆ

ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದ ಸಂಸ್ಥಾಪಕಿ ದಿ| ಶಾರದಾ ಟೀಚರ್ ಇವರ ೮ನೇ ಪುಣ್ಯ ತಿಥಿ, ಸಂಸ್ಮರಣಾ ಕಾರ್ಯಕ್ರಮ ಆಶ್ರಮದಲ್ಲಿ ಜರಗಿತು. 

ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.  ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ರಮೇಶ್ ಶೆಣೈ, ಉದ್ಯಮಿ ಸತೀಶ್ ಎಡನೀರು, ಸವಿತಾ ಟೀಚರ್, ಬ್ಲೋಕ್ ಪಂ. ಸದಸ್ಯೆ ಅಶ್ವಿನಿ ನೀರ್ಚಾಲು, ಪಂಚಾ ಯತ್ ಸದಸ್ಯೆ ಸ್ವಪ್ನ ಉಪಸ್ಥಿತರಿದ್ದರು. ರಮೇಶ್ ಕಳರಿ ಸ್ವಾಗತಿಸಿ, ಗಣಪತಿ ಪ್ರಸಾದ್ ಕುಳಮರ್ವ ವಂದಿಸಿದರು.

You cannot copy contents of this page