ಪೆರಿಯ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಅವಳಿ ಕೊಲೆ ಪ್ರಕರಣ: ಸಾಕ್ಷಿದಾರರ ಸಾಕ್ಷಿ ಹೇಳಿಕೆ ಪೂರ್ಣ
ಕಾಸರಗೋಡು: 2019 ಫೆಬ್ರವರಿ 17ರಂದು ಕೇರಳವನ್ನು ನಡುಗಿಸಿದ ಪೆರಿಯಾ ಕಲ್ಯೋಟ್ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತ ರಾದ ಶರತ್ಲಾಲ್ (30) ಮತ್ತು ಕೃಪೇಶ್ (28)ರನ್ನು ರಾಜಕೀಯ ದ್ವೇಷದಿಂದ ಬರ್ಭರವಾಗಿ ಕೊಲೆಗೈದ ಪ್ರಕರಣದ ಸಾಕ್ಷಿದಾರರ ಸಾಕ್ಷಿ ಹೇಳಿಕೆ ಪ್ರಕ್ರಿಯೆಗಳನ್ನು ಕೊಚ್ಚಿಯಲ್ಲಿರುವ ಸಿಬಿಐ ನ್ಯಾಯಾಲಯದಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಬಳಿಕ ಇಂದಿನಿಂದ ವಾದ-ಪ್ರತಿವಾದ ಕ್ರಮಗಳು ನ್ಯಾಯಾಲಯದಲ್ಲಿ ಆರಂಭಗೊಂಡಿದೆ. ಒಟ್ಟು ೧೫೮ ಸಾಕ್ಷಿದಾರರ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಂಡಿದೆ.
ನ್ಯಾಯಾಧೀಶ ಶೇಷಾದ್ರಿನಾಥ್ರ ಸಿಬಿಐ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರೋಸಿಕ್ಯೂಶನ್ ಪರವಾಗಿ ನ್ಯಾಯಾಲಯದ ಚೀಫ್ ಬೇಬಿಜೋಸೆಫ್, ಆರೋಪಿಗಳ ಪರವಾಗಿ ನ್ಯಾಯಾಲಯದ ಸಿ.ಕೆ. ಶ್ರೀಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.
ಆರಂಭದಲ್ಲಿ ಬೇಕಲ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಕ್ರೈಂಬ್ರಾಂಚ್ಗೆ ಹಸ್ತಾಂತರಿಸಲಾಗಿತ್ತು. ನಂತರ ಕೊಲೆಗೈಯ್ಯಲ್ಪಟ್ಟವರ ಪೋಷಕರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಈ ಕೊಲೆ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐಗೆ ಹಸ್ತಾಂತರಿಸಿತ್ತು. ಸಿಪಿಎಂ ನೇತಾರರಾದ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್, ಹೊಸದುರ್ಗ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಎಂ. ಬಾಲಕೃಷ್ಣನ್, ವೆಳುತ್ತೋಳಿ ರಾಘವನ್, ಎ. ಪೀತಾಂಬರನ್, ಪಿ. ರಾಜೇಶ್ ಸೇರಿದಂತೆ ಒಟ್ಟು ೨೪ ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಲಾಗಿದೆ.