ನಟ ‘ಕೀರಿಕಾಡನ್’ ಮೋಹನ್‌ರಾಜ್ ನಿಧನ
ತಿರುವನಂತಪುರ: ಮೋಹನ್ ಲಾಲ್ ನಾಯಕನಾಗಿ ಅಭಿ ನಯಿಸಿದ ‘ಕಿರೀಟಂ’ ಎಂಬ ಸಿನೆಮಾದಲ್ಲಿ ‘ಕೀರಿಕ್ಕಾಡನ್’ ಜೋಸ್ ಎಂಬ ಖಳನಾಯಕ ಪಾತ್ರದಲ್ಲಿ ಮಿಂಚಿ ಬಳಿಕ ಮಲೆಯಾಳಂ ಸಿನೆಮಾ ರಂಗದ ಖ್ಯಾತ ಖಳನಾಯಕನಾಗಿ ಮೇರು ಮಟ್ಟಕ್ಕೇರಿದ್ದ ಮೋಹನ್‌ರಾಜ್ (69) ಅಸೌಖ್ಯದಿಂದ ತಿರುವನಂ ತಪುರ ಕಾಂತಿರಂಕುಳಂ ಸುಕುಮಾ ರನ್ ನಿಕೇತನದ ತಮ್ಮ ಸ್ವ-ಗೃಹದಲ್ಲಿ ನಿನ್ನೆ ನಿಧನ ಹೊಂದಿದರು.
1988ರಲ್ಲಿ ಕೆ. ಮಧು ನಿರ್ದೇಶಿಸಿದ ‘ಮೂನಾಂಮರ’ ಸಿನೆಮಾದ ಮೂಲಕ ಸಿನೆಮಾ ರಂಗಕ್ಕೆ ಪದಾರ್ಪಣೆಗೈದಿದ್ದ ಮೋಹನ್‌ರಾಜ್ 1989ರಲ್ಲಿ ಬಿಡುಗಡೆಗೊಂಡ ‘ಕಿರೀಟಂ’ ಚಿತ್ರದಲ್ಲಿ ಅಭಿನಯಿಸಿ ‘ಕೀರಿಕ್ಕಾಡನ್ ಜೋಸ್’ ಎಂಬ ಖಳನಾಯಕನಾಗಿ ಅಭಿನಯಿಸಿ ಮಿಂಚಿದ್ದರು. ಬಳಿಕ ಅವರು ಕೀರಿಕಾಡನ್ ಜೋಸ್ ಎಂಬ ಹೆಸರಲ್ಲೇ ಖ್ಯಾತಿ ಪಡೆದರು.
ಕಸ್ಟಮ್ಸ್ ಎನ್‌ಫೋ ರ್ಸ್‌ಮೆಂಟ್ ಅಧಿಕಾರಿಯಾಗಿದ್ದ ಮೋಹನ್‌ರಾಜ್ ಇಲಾಖೆಯ ಅನುಮತಿ ಪಡೆದು ಸಿನೆಮಾದಲ್ಲಿ ಅಭಿನಯಿಸತೊಡಗಿದರು. ಸಿನೆಮಾದಲ್ಲಿ ಮಿಂಚಲಾರಂಭಿಸಿದ ಬಳಿಕ ಅವರು ಎನ್‌ಫೋರ್ಸ್ ಮೆಂಟ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಉದ್ಯೋಗದಲ್ಲಿ ಭಡ್ತಿಗೊಂಡು ಬಳಿಕ ಆ ಸೇವೆಯಿಂದ ನಿವೃತ್ತಿ ಹೊಂದಿ ದರು. 300ರಷ್ಟು ಸಿನೆಮಾದಲ್ಲಿ ಇವರು ಅಭಿನಯಿಸಿದ್ದಾರೆ.