ಎಂ.ಟಿ. ವಾಸುದೇವನ್ ನಾಯರ್‌ರ ಮನೆಯಿಂದ 26 ಪವನ್ ಚಿನ್ನಾಭರಣ ಕಳವು

ಕಲ್ಲಿಕೋಟೆ: ಖ್ಯಾತ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್‌ರ ಮನೆಯಿಂದ ಕಳವು ನಡೆಸಲಾಗಿದೆ. 26 ಪವನ್‌ನಷ್ಟು ಚಿನ್ನವನ್ನು ಕಳವುಗೈಯ್ಯಲಾಗಿದೆ. ಕೊಟ್ಟಾರಂ ರಸ್ತೆಯಲ್ಲಿರುವ ಎಂ.ಟಿಯವರ ಮನೆಯಿಂದ ಕಳವು ನಡೆಸಲಾಗಿದೆ. 3 ಸರ, ಬಳೆಗಳು, ಬೆಂಡೋಲೆ, ಡೈಮಂಡ್ ಬೆಂಡೋಲೆ, ಪದಕ ಸಹಿತ ಚಿನ್ನಾಭರಣಗಳನ್ನು ಕಳವುಗೈಯ್ಯಲಾಗಿದೆ. ಎಂ.ಟಿ.ಯ ಪತ್ನಿ ಸರಸ್ವತಿ ನೀಡಿದ ದೂರಿನಂತೆ ನಡಕ್ಕಾವ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ತಿಂಗಳ 22ರಿಂದ 30ರ ಮಧ್ಯೆ ಕಳವು ನಡೆದಿರಬೇಕೆಂದು ಶಂಕಿಸಲಾಗುತ್ತಿದೆ. ಚಿನ್ನಾಭರಣ ಬ್ಯಾಂಕ್ ಲಾಕರ್‌ನಲ್ಲಿದೆ ಎಂದು ತಿಳಿದುಕೊಳ್ಳಲಾಗಿತ್ತು. ಆದರೆ ಲಾಕರ್ ಹಾಗೂ ಮನೆಯಲ್ಲಿ ಪರಿಶೀಲಿಸಿದಾಗ ಚಿನ್ನಾಭರಣ ಕಂಡು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳವುಹೋಗಿರುವುದಾಗಿ ಶಂಕಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page