ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಮಹಾಸಭೆ: ಸದಸ್ಯರಿಗೆ 5 ಶೇ. ಡಿವಿಡೆಂಡ್ ವಿತರಣೆಗೆ ನಿರ್ಧಾರ

ಮುಳ್ಳೇರಿಯ: ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್‌ನ 2023-24ನೇ ಹಣಕಾಸು ವರ್ಷದ ಮಹಾಸಭೆ ಇತ್ತೀಚೆಗೆ ನಡೆಯಿತು. ಬ್ಯಾಂಕ್‌ನ ಅಧ್ಯಕ್ಷ ವಿ.ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾಯರು ದೀಪಬೆಳಗಿಸಿ ಉದ್ಘಾಟಿಸಿದರು. ಕಾರ್ಯದರ್ಶಿ ಉದಯ ಕುಮಾರ್ ಎನ್ ಲೆಕ್ಕಪತ್ರ ಮಂಡಿಸಿದರು.  ಬ್ರಾಂಚ್ ಮೆನೇಜರ್ ರಾಜೇಶ್ ಕರಡು ಬಜೆಟ್ ಮಂಡಿಸಿದರು. ಬ್ಯಾಂಕ್‌ನ 2023-24ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಲಾಭ ಗಳಿಸಿದ್ದು, ಇದರಿಂದ ಸದಸ್ಯರಿಗೆ 5 ಶೇ. ಡಿವಿಡೆಂಡ್ ವಿತರಿಸಲು ನಿರ್ಧರಿ ಸಲಾಯಿತು. ವಯನಾಡು ಭೂಕುಸಿತದಿಂದ ಸಂಕ ಷ್ಟಕ್ಕೊಳ ಗಾದವರ ಪುನರ್ವಸತಿಗಾಗಿ ಬ್ಯಾಂಕ್‌ನಿಂದ ಒಂದು ಲಕ್ಷ ರೂಪಾ ಯಿಗಳನ್ನು ಸಹಕಾರಿ ಇಲಾಖೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಮನೋಜ್ ಕುಮಾರ್‌ರಿಗೆ ಹಸ್ತಾಂತರಿಸಲಾ ಯಿತು. ಇದೇ ವೇಳೆ ಉದ್ಯೋಗದಲ್ಲಿ ಭಡ್ತಿಗೊಂಡ ಮನೋಜ್ ಕುಮಾರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ಯಾಂಕ್‌ನ ನಿರ್ದೇಶಕರಾದ ಆಶೀ ರ್ವಾದ್, ಮುರಳೀಧರ ಬೋ ಗಲ್ಕರ್, ಮುರಳೀಧರ ಎಸ್, ಅಶೋಕ್ ಕುಮಾರ್, ಚಂದ್ರಕಲಾ, ಪ್ರಶಾಂತಿ ಪಿ ನಾಯ್ಕ್, ಶ್ಯಾಮಲಾ ಬಲ್ಲಾಳ್ ಶುಭಾಶಂಸನೆಗೈದರು. ನಿರ್ದೇಶಕಿ ಶ್ಯಾಮಲಾ ಪ್ರಾರ್ಥನೆ ಹಾಡಿದರು. ನಿರ್ದೇಶಕರಾದ  ಸುಂದರ ರಾಜ್ ರೈ ನಿರೂಪಿಸಿದರು. ನಿರ್ದೇಶಕರಾದ ಜಯ ರಾಜ್ ರೈ ನಿರೂಪಿಸಿ, ಗೋಪಾಲನ್ ವಂದಿಸಿದರು.

You cannot copy contents of this page