ನಟಿಗೆ ಕಿರುಕುಳ: ನಟ ಸಿದ್ದಿಕ್ ಹೇಳಿಕೆ ನೀಡಲು ಪೊಲೀಸರ ಮುಂದೆ ಹಾಜರು

ತಿರುವನಂತಪುರ:  ನಟಿಗೆ ಕಿರುಕುಳ ನೀಡಿದ ಆರೋಪ ದಂತೆ ಕೇಸು ದಾಖಲಿಸಲ್ಪಟ್ಟ ನಟ ಸಿದ್ದಿಕ್ ಹೇಳಿಕೆ ನೀಡಲು ತಿರುವನಂತಪುರ ಕಮಿಶನರ್ ಕಚೇರಿಯಲ್ಲಿ ಹಾಜರಾ ದರು. ಇದೇ ವೇಳೆ ಹಾಜರಾಗಲು ತಿಳಿಸಿದ ಸ್ಥಳ ಇದಲ್ಲವೆಂದು ತಿಳಿಸಿ ಸಿದ್ದಿಕ್‌ರನ್ನು ಕಂಟೋ ನ್ಮೆಂಟ್ ಠಾಣೆಯ ಭಾಗವಾದ ಪೊಲೀಸ್ ಕಂಟ್ರೋಲ್ ರೂಂನ ಸಿಟಿ ಪೊಲೀಸ್ ಕಮಿಶನರ್‌ರ ಕಚೇರಿಗೆ ಕಳುಹಿಸ ಲಾಯಿತು.  ಸುಪ್ರೀಂಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಲಭಿಸಿದ ಬೆನ್ನಲ್ಲೇ  ಹೇಳಿಕೆ   ಸಿದ್ಧ ವೆಂದು ತಿಳಿಸಿ ಸಿದ್ದಿಕ್ ಪೊಲೀಸರಿಗೆ ಇ ಮೇಲ್ ಸಂದೇಶ ಕಳುಹಿಸಿದ್ದರು. ಇದರಂತೆ ಸಿದ್ದಿಕ್‌ಗೆ ಪೊಲೀಸರು ನೋಟೀಸು ನೀಡಿದ್ದರು. ಸಿದ್ದಿಕ್‌ರನ್ನು ಇಂದು ತನಿಖೆಗೊಳಪಡಿಸಿದ ಬಳಿಕ ಬಿಡುಗಡೆಗೊಳಿಸಲಾಗುವುದೆಂದು  ತಿಳಿದುಬಂದಿದೆ.

You cannot copy contents of this page