ಶಬರಿಮಲೆ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ: ವ್ಯಾಪಕ ಪ್ರತಿಭಟನೆ

ಶಬರಿಮಲೆ: ಪ್ರಸಿದ್ಧ ಶಬರಿಮಲೆ ದೇಗುಲದ ವಾರ್ಷಿಕ ಮಂಡಲ ಹಾಗೂ ಮಕರಜ್ಯೋತಿ ಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ   ಈ ವರ್ಷ  ಆನ್‌ಲೈನ್‌ನಲ್ಲಿ ಮುಂಗಡವಾಗಿ ಬುಕ್ಕಿಂಗ್ ನಡೆಸಿದವರಿಗೆ ಮಾತ್ರವೇ ದೇಗುಲಕ್ಕೆ ಪ್ರವೇಶ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.

 ಕಳೆದ ವರ್ಷ  ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ   ಅದನ್ನು ನಿರ್ವಹಿಸಲು ಸರಕಾರ ಸೂಕ್ತ ವ್ಯವಸ್ಥೆ  ಮಾಡದ ಕಾರಣ  ಭಾರೀ ಅವ್ಯವಸ್ಥೆ ಉಂಟಾಗಿತ್ತು. ಭಕ್ತರು ದಿನಗಳ ಕಾಲ ದರ್ಶನಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದು ಸರಕಾರದ ವಿರುದ್ಧ  ಭಾರೀ ಆಕ್ರೋಶಕ್ಕೂ ದಾರಿ ಮಾಡಿಕೊಟ್ಟಿತ್ತು. ಹೊರ ರಾಜ್ಯಗಳಿಂದ ಆಗಮಿಸಿದ  ನೂರಾರು ಭಕ್ತರಿಗೆ ದೇವರ ದರ್ಶನ ಲಭಿಸದೇ ಹಿಂತಿರುಗಬೇಕಾದ ಸ್ಥಿತಿಯೂ ಉಂಟಾ ಗಿತ್ತು. ಈ ವರ್ಷ ಭಕ್ತರ ನಿರ್ವಹಣೆ ಸಮರ್ಪಕಗೊಳಿಸುವ ನಿಟ್ಟಿನಲ್ಲಿ  ಆನ್ ಲೈನ್ ಮೂಲಕ ಮುಂಗಡ ಬುಕ್ಕಿಂಗ್  ನಡೆಸಿದವರಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಲು ತಿರುವನಂತಪುರ ದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ಜರಗಿದ ತಿರುವಿದಾಂಕೂರ್ ದೇವಸ್ವಂ ಮಂಡಳಿಯ ವಿಶೇಷ ಅವಲೋಕನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ನಿತ್ಯ ಗರಿಷ್ಠ ೮೦ ಸಾವಿರ ಮಂದಿಗೆ ಮಾತ್ರವೇ ಕ್ಷೇತ್ರ ದರ್ಶನಕ್ಕೆ ಪ್ರವೇಶ ನೀಡಲಾಗುವುದು. ವರ್ಚ್ಯುವಲ್ ಕ್ಯೂ ಬುಕ್ಕಿಂಗ್ ಸಮಯದಲ್ಲಿ ಆಗಮಿಸುವ ಭಕ್ತರಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಬುಕ್ಕಿಂಗ್ ನಡೆಸದವವರಿಗೆ ಕ್ಷೇತ್ರ ದರ್ಶನ ಲಭಿಸದು ಎಂಬ ತೀರ್ಮಾನವನ್ನು ಸಭೆ ಕೈಗೊಂಡಿದೆ.

ಎರುಮೇಲಿ, ಪುಲಿಮೇಡ್ ಹಾಗೂ ಕಾನನ ದಾರಿ ಮೂಲಕ ಸಾಗಲೂ ಆನ್ ಲೈನ್ ಮೂಲಕ ಬುಕ್ಕಿಂಗ್ ನಡೆಸಬೇ ಕೆಂಬ ತೀರ್ಮಾನ ಕೈಗೊಂಡಿದೆ. ಈ ತೀರ್ಮಾನದ ಬೆನ್ನಲ್ಲೇ ಅದನ್ನು ಹಿಂತೆದುಕೊಳ್ಳಬೇಕೆಂದು ವಿಶ್ವಹಿಂದೂ ಪರಿಷತ್,  ಹಿಂದೂ ಐಕ್ಯವೇದಿ ಸೇರಿದಂತೆ ಇತರ ಹಲವು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ರಂಗಕ್ಕಿಳಿದಿವೆ. ಸರಕಾರದ ಈ ತೀರ್ಮಾನ ಶಬರಿಮಲೆ ತೀರ್ಥಾ ಟನೆಯನ್ನು ಬುಡಮೇಲುಗೊಳಿಸುವಂತೆ ಮಾಡುವ ರಾಜ್ಯ ಸರಕಾರದ ಯತ್ನಗಳ ಹೊಸ ರೂಪವಾಗಿದೆಯೆಂದು ಹಿಂದೂ ಸಂಘಟನೆಗಳು ಆರೋಪಿಸಿವೆ.  ಆದ್ದರಿಂದ ಈ ತೀರ್ಮಾನವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಈ ತೀರ್ಮಾನಕ್ಕೆ ಬರುವ ಮೊದಲು ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರೊಂದಿಗೆ ಸರಕಾರ ಕನಿಷ್ಠ ಸಮಾಲೋಚನೆಯನ್ನೂ ನಡೆಸಿರಲಿಲ್ಲ. ತೀರ್ಮಾನದೊಂದಿಗೆ ಮುಂದೆ ಸಾಗಿದಲ್ಲಿ ತೀವ್ರ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗಿ ಬರಲಿದೆ. ಹಾಗೆ ನಡೆದಲ್ಲಿ ಅದು ಶಬರಿಮಲೆಯಲ್ಲಿ ಮತ್ತೆ ಒಂದು ವಿವಾದ ಕೇಂದ್ರವನ್ನಾಗಿ ಸಲಿದೆಯೆಂದು ವಿಹಿಂಪ  ಪ್ರಧಾನ ಕಾರ್ಯದರ್ಶಿ  ಪಿ.ಆರ್. ರಾಜಶೇಖರನ್ ಹೇಳಿದ್ದಾರೆ.   ಸರಕಾರದ ಈ ತೀರ್ಮಾನ ತೀರ್ಥಾಟನೆಯನ್ನು ಬುಡಮೇಲುಗೊಳಿಸುವ ಒಂದು ಒಳಸಂಚು ಆಗಿದೆಯೆಂದು ಇನ್ನೊಂದೆಡೆ  ಹಿಂದೂ ಐಕ್ಯವೇದಿ ಆರೋಪಿಸಿದೆ.

Leave a Reply

Your email address will not be published. Required fields are marked *

You cannot copy content of this page