ಲೇಬರ್ ಟ್ಯಾಕ್ಸ್ ಹೆಸರಲ್ಲಿ ಕೇರಳ ಸರಕಾರ ಹಗಲು ದರೋಡೆ-ಬಿಜೆಪಿ
ಮಂಜೇಶ್ವರ: ಸರಕಾರ ಕೇರಳದ ಬಡ ಜನರನ್ನು ವಂಚಿಸುತ್ತಿದೆ, ಕಷ್ಟ ಪಟ್ಟು ಮನೆ ಕಟ್ಟುವ ಜನರಿಗೆ ಜಮೀನು ಖರೀದಿ, ನೋಂದಣಿ ದರ ಹೆಚ್ಚಿಸಿದ ಸರಕಾರ ಈಗ ಕಟ್ಟಿದ ಮನೆಗೆ ನಂಬರ್ ನೀಡಬೇಕಾದರೆ ಲೇಬರ್ ಟ್ಯಾಕ್ಸ್ ಹೆಸರಲ್ಲಿ ಹಗಲು ದರೋಡೆಗೆ ಇಳಿದಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಆರೋಪಿಸಿದ್ದÁರೆ. 1000 ಸ್ಕ್ವೇಯಫೀಟ್ ಮನೆ ನಿರ್ಮಾಣ ಮಾಡಿದರೆ 11ಸಾವಿರ ಕ್ಕೂ ಅಧಿಕ ಲೇಬರ್ ಟ್ಯಾಕ್ಸ್ ವಸೂಲು ಮಾಡುವ ಸರಕಾರದ ಲೂಟಿ ಒಪ್ಪಲು ಸಾಧ್ಯವಿಲ್ಲ.
ಮನೆ ಕಟ್ಟುವವರು ನೌಕರರಿಗೆ ಸಂಬಳ ಕೊಟ್ಟೆ ನಿರ್ಮಾಣ ಮಾಡುತ್ತಾರೆ. ಹಾಗಿರುವಾಗ ಸರಕಾರ ಲೇಬರ್ ಟ್ಯಾಕ್ಸ್ ಹೆಸರಲ್ಲಿ ಅನಾವಶ್ಯಕ ಹಣ ಸಂಗ್ರಹ ಸಾಮಾನ್ಯ ನಾಗರಿಕರಿಗೆ ಮಾಡುವ ವಂಚನೆ ಮಾತ್ರವಲ್ಲ ಮನೆ ನಂಬರ್ ನೀಡಲು ಲೇಬರ್ ಟ್ಯಾಕ್ಸ್ ಕಡ್ಡಾಯ ಮಾಡಿರುವ ಸರಕಾರದ ಕ್ರಮವು ದೊಡ್ಡ ಹೊರೆಯಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಕೆಂಪು ಕಲ್ಲು ಉದ್ಯಮವನ್ನು ಸಂಪೂರ್ಣ ನಿಲ್ಲಿಸುವಂತೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಕ್ರಮ ದಿಂದ ನೌಕರರು, ಕಟ್ಟಡ ನಿರ್ಮಾಣ ಮನೆ ನಿರ್ಮಾಣ ಸ್ಥಗಿತವಾಗಿದೆ. ಜಿಲ್ಲಾಧಿಕಾರಿ ಗಳು ತಮ್ಮ ಕ್ರಮವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಬಿಜೆಪಿ ಮಂಡಲ ಕೋರ್ ಸಭೆಯಲ್ಲಿ ಆದರ್ಶ ಬಿ ಎಂ, ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ
ಅಶ್ವಿನಿ ಎಂ ಎಲ್,ಮಣಿಕಂಠ ರೈ, ಯತಿರಾಜ್ ಶೆಟ್ಟಿ, ಎ.ಕೆ ಕಯ್ಯಾರ್, ತುಳಸಿ ಕುಮಾರಿ, ಯಾದವ ಬಡಾಜೆ, ಕೆ.ವಿ. ಭಟ್ ಉಪಸ್ಥಿತರಿದ್ದರು.