ಅಡಿಕೆ ಕದ್ದ ಆರೋಪ ಹೊರಿಸಿ ಸಂಬಂಧಿಕನನ್ನು ಕೊಲೆಗೈದ ಪ್ರಕರಣ: ಆರೋಪಿ ದೋಷಿ, ಶಿಕ್ಷೆ ಘೋಷಣೆ ಇಂದು
ಕಾಸರಗೋಡು: ಅಡಿಕೆ ಕಳವುಗೈದಿ ರುವುದಾಗಿ ಆರೋಪಿಸಿ ಸಂಬಂಧಿಕನಾದ ಯುವಕನನ್ನು ಅರಣ್ಯದಲ್ಲಿ ಕೊಲೆಗೈದ ಪ್ರಕರಣದ ಆರೋಪಿಯ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ದಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆ ಹಿನ್ನೆಲೆಯಲ್ಲಿ ಆತ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಇಂದು ಘೋಷಿಸಲಿದೆ.
ಅಡೂರು ವೆಳ್ಳಿಕ್ಕಾನದ ಗಣಪ ನಾಯ್ಕ ಈ ಕೊಲೆ ಪ್ರಕರಣದ ಆರೋ ಪಿಯಾಗಿದ್ದು, ಆತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ. ಅಡೂರು ಕಾಟಿಕಜೆ ಮಾವಿನಡಿ ನಿವಾಸಿ ಸುಧಾಕರ ಯಾನೆ ಚಿದಾನಂದ (30) ಎಂಬವರನ್ನು ಕೊಲೆಗೈದ ಪ್ರಕರಣ ವಾಗಿದೆ ಇದು.
2019 ಫೆಬ್ರವರಿ 7ರಂದು ಅಡೂರು ಸರಕಾರಿ ರಕ್ಷಿತಾರಣ್ಯದ ವೆಳ್ಳಿಕ್ಕಾನ ಐವರ್‌ಕುಳಿಯಲ್ಲಿ ಚಿದಾ ನಂದ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರೋಪಿ ಗಣಪ ನಾಯ್ಕನ ತೋಟದಿಂದ ಚಿದಾನಂದ ಅಡಿಕೆ ಕದ್ದಿರುವುದಾಗಿ ಆರೋಪಿಸಿ ಅವರನ್ನು ಇರಿದು ಕೊಲೆಗೈದ ಆರೋ ಪದಂತೆ ಆದೂರು ಪೊಲೀ ಸರು ಗಣಪ ನಾಯ್ಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಆದೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಎಂ.ಎ. ಮ್ಯಾಥ್ಯೂ ಬಳಿಕ ಎಎ. ಜೋನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದರು. ನಂತರ ಇನ್‌ಸ್ಪೆಕ್ಟರ್ ಆಗಿದ್ದ ಕೆ. ಪ್ರೇಮ್ ಸದನ್ ಈ ಕೊಲೆ ಪ್ರಕ ರಣದ ಆರೋಪಪಟ್ಟಿ ಯನ್ನು ನ್ಯಾಯಾ ಲಯಕ್ಕೆ ಸಲ್ಲಿಸಿದ್ದರು. ಯಾವುದೇ ನೇರ ಸಾಕ್ಷಿಗಳಿಲ್ಲದ ಕೇಸು ಇದಾಗಿತ್ತು. ಕೇವಲ ವೈಜ್ಞಾನಿಕ ಪುರಾವೆಗಳಿಂದಲೇ ಈ ಕೊಲೆ ಸಾಬೀತುಗೊಂಡಿದೆಯೆಂಬ ವಿಶೇಷತೆ ಇದಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 43 ದಾಖಲುಪತ್ರಗಳು ಹಾಗೂ 15 ವಸ್ತು ಪುರಾವೆಗಳನ್ನು ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಆರೋಪಿ ಈ ಹಿಂದೆ ಸಂಬಂಧಿ ಕಳಾದ ಮಹಿಳೆಯೋರ್ವೆ ಯನ್ನು ಕೊಲೆಗೈದ ಪ್ರಕರಣದಲ್ಲೂ ಶಿಕ್ಷೆ ಅನುಭವಿಸಿದ್ದನು.