ಕಾಸರಗೋಡು: ರಾಜ್ಯದಲ್ಲಿ ಆದ್ಯತಾ ವಿಭಾಗಕ್ಕೆ ಸೇರಿದ ಹಳದಿ ಮತ್ತು ಪಿಂಕ್ ಕಾರ್ಡ್ ದಾರರಿ ಗಿರುವ ಮಸ್ಟರಿಂಗ್ ಅವಧಿಯನ್ನು ಅ. 25ರ ತನಕ ವಿಸ್ತರಿಸಲಾಗಿ ದೆಯೆಂದು ರಾಜ್ಯ ನಾಗರಿಕ ಸರಬರಾಜು-ಆಹಾರ ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ಇನ್ನು ರೇಶನ್ ವ್ಯಾಪಾರಿಗಳ ಸಹಾಯ ದೊಂದಿಗೆ ನೇರವಾಗಿ ಮನೆ ಮನೆಗಳಿಗೆ ಸಂದರ್ಶಿಸಿ ಐರಿಶ್ ಸ್ಕ್ಯಾನರ್ ಉಪಯೋಗಿಸಿ ಅಪ್‌ಡೇಶನ್ ಮಾಡಲಾಗು ವುದೆಂದು ಸಚಿವರು ತಿಳಿಸಿದ್ದಾರೆ. ಮಸ್ಟರಿಂಗ್ ನಡೆಸಲು ಇನ್ನೂ ಲಕ್ಷಾಂತರ ಮಂದಿ ಬಾಕಿ ಉಳಿದುಕೊಂಡಿದ್ದು, ಅವರ ಸೌಕರ್ಯಾರ್ಥವಾಗಿ ಮಸ್ಟರಿಂಗ್ ಸಮಯವನ್ನು ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.