ಅಡೂರು ನಿವಾಸಿ ಮಂಗಳೂರಿನ ಹೆಡ್ ಕಾನ್‌ಸ್ಟೇಬಲ್ ಚಂದ್ರ ನಿಧನ

ಅಡೂರು: ಅಪರಾಧ ಪ್ರಕರಣ ಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ನಿಷ್ಣಾತ ರಾಗಿದ್ದ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಡೂರು ನಿವಾಸಿ ಚಂದ್ರ ಅಡೂರು (೪೯) ಅಸೌಖ್ಯದಿಂದ ನಿಧನ ಹೊಂದಿ ದರು. ಕಳೆದ ಮೂರು ತಿಂಗಳಿಂದ ಅಸೌಖ್ಯ ಬಾಧಿಸಿ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಜ್ವರ ಉಲ್ಭಣಗೊಂಡ ಕಾರಣ ಕಂಕನಾಡಿ ಆಸ್ಪತ್ರೆಗೂ, ಬಳಿಕ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ನಿಧನ ಸಂಭವಿಸಿದೆ.

ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ವರ್ಷಗಳಿಂದ ಹೆಡ್‌ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ನಾಟಕ ಮುಖ್ಯಮಂತ್ರಿಯ ಚಿನ್ನದ ಪದಕ, ರಾಷ್ಟ್ರಪತಿಯ ಚಿನ್ನದ ಪದಕ ಇವರ ಸೇವೆಗೆ ಸಂದಿದೆ. ಮಂಗಳೂರು ಸಿಟಿ ಕ್ರೈಂಬ್ರಾಂಚ್, ಸಿಸಿಆರ್‌ಬಿ, ಡಿಸಿಐಬಿ ಗಳಲ್ಲಿ ದುಡಿದಿದ್ದರು. ಹಲವಾರು ಅಪರಾಧ ಪ್ರಕರಣಗಳಲ್ಲಿನ ಪ್ರತ್ಯೇಕ ತಂಡದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮತರು ಪತ್ನಿ ಜ್ಯೋತಿ, ಮಕ್ಕಳಾದ ದತ್ತಕಿರಣ್, ಪ್ರಣವ್ (ವಿದ್ಯಾರ್ಥಿಗಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page